ಸಿಹಿಯಾದ ಚಾಕಲೇಟ್ ಮಿಲ್ಕ್ ಶೇಕ್ ಮಕ್ಕಳಿಗಂತೂ ಫೇವರಿಟ್. ಬಿರು ಬಿಸಿಲಲ್ಲಿ ತಣ್ಣಗಿನ ಚಾಕಲೇಟ್ ಮಿಲ್ಕ್ ಶೇಕ್ ಕುಡಿದ್ರೆ ಮನಸ್ಸು ಮುದಗೊಳ್ಳುತ್ತದೆ. ಫಾಸ್ಟ್ ಫುಡ್ ಜೊತೆಗೂ ಇದು ಒಳ್ಳೆ ಕಾಂಬಿನೇಶನ್. ಕೋಕಾ ಪೌಡರ್ ಅಥವಾ ಚಾಕಲೇಟ್ ಬಾರ್ ಮತ್ತು ಚಾಕಲೇಟ್ ಐಸ್ ಕ್ರೀಂ ಬಳಸಿಯೂ ಇದನ್ನು ಮಾಡಬಹುದು.
ಬೇಕಾಗುವ ಸಾಮಗ್ರಿ : ಒಂದು ಕಪ್ ತಣ್ಣಗಿನ ಹಾಲು, 1 ಚಮಚ ಕೋಕಾ ಪೌಡರ್, 2 ಚಮಚ ಸಕ್ಕರೆ, 1 ಸ್ಕೂಪ್ ವೆನಿಲ್ಲಾ ಐಸ್ ಕ್ರೀಂ, 6 ಐಸ್ ಕ್ಯೂಬ್, 1 ಚಮಚ ಚಾಕಲೇಟ್ ಸಿರಪ್, ವಿಪ್ಡ್ ಕ್ರೀಮ್.
ಮಾಡುವ ವಿಧಾನ : ಮೊದಲು ಹಾಲನ್ನು ಬ್ಲೆಂಡರ್ ಗೆ ಹಾಕಿ. ಅದಕ್ಕೆ ಕೋಕಾ ಪೌಡರ್ ಮತ್ತು ಸಕ್ಕರೆ ಬೆರೆಸಿ. ಜೊತೆಗೆ ವೆನಿಲ್ಲಾ ಐಸ್ ಕ್ರೀಂ ಹಾಕಿ. ನಂತರ ಐಸ್ ಕ್ಯೂಬ್ಸ್ ಹಾಕಿಕೊಂಡು ಬ್ಲೆಂಡ್ ಮಾಡಿ. ಒಂದು ಚಮಚ ಚಾಕಲೇಟ್ ಸಿರಪ್ ನಿಂದ ಗ್ಲಾಸನ್ನು ಅಲಂಕರಿಸಿ ಅದರಲ್ಲಿ ಚಾಕಲೇಟ್ ಮಿಲ್ಕ್ ಶೇಕ್ ಹಾಕಿ. ವಿಪ್ಡ್ ಕ್ರೀಮ್ ಮತ್ತು ಐಸ್ ಕ್ಯೂಬ್ ಅನ್ನು ಮೇಲಿಂದ ಹಾಕಿ ಸರ್ವ್ ಮಾಡಿ.