ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಾಣವಾಗಿರುವ ಭಾರತದ ಮೊದಲ ಕೇಬಲ್ ಬೆಂಬಲಿತ ಸೇತುವೆ ಅಂಜಿ ಖಾಡ್ ಸೇತುವೆಯನ್ನು ಪೂರ್ಣಗೊಳಿಸಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಸೇತುವೆಯನ್ನು ಪೂರ್ಣಗೊಳಿಸುವ ಕುರಿತು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ಯೋಜನೆಯನ್ನು ಶ್ಲಾಘಿಸಿದರು.
ಸೇತುವೆಯನ್ನು 11 ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. “11 ತಿಂಗಳಲ್ಲಿ, ಭಾರತದ ಮೊದಲ ಕೇಬಲ್ ಸ್ಟೇಡ್ ರೈಲು ಸೇತುವೆ ಸಿದ್ಧವಾಗಿದೆ. ಎಲ್ಲಾ 96 ಕೇಬಲ್ಗಳನ್ನು ಹೊಂದಿಸಲಾಗಿದೆ! #ಅಂಜಿಖಾಡ್ ಸೇತುವೆ ಕೇಬಲ್ ಎಳೆಗಳ ಒಟ್ಟು ಉದ್ದ 653 ಕಿಮೀ” ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಗುರುವಾರ ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವ ದರ್ಶನ ಜರ್ದೋಶ್ ಸೇತುವೆಗೆ ಭೇಟಿ ನೀಡಿ ಯೋಜನೆಗೆ ಸಂಬಂಧಿಸಿದ ಪ್ರತಿಯೊಬ್ಬರನ್ನು ಶ್ಲಾಘಿಸಿದರು.