ಪ್ರತಿ ದೇಶದಲ್ಲೂ ಅಪರಾಧ ಕೃತ್ಯಗಳು ಸರ್ವೇಸಾಮಾನ್ಯವಾಗಿಬಿಟ್ಟಿವೆ. ಕೊಲೆ, ಸುಲಿಗೆ, ದರೋಡೆ ಹೀಗೆ ಅನೇಕ ಘಟನೆಗಳು ಪ್ರತಿನಿತ್ಯ ವರದಿಯಾಗುತ್ತಲೇ ಇರುತ್ತವೆ. ಇಂತಹ ಕೃತ್ಯಗಳೇ ಇಲ್ಲದ ಪ್ರಶಾಂತವಾದ ಸ್ಥಳದಲ್ಲಿ ಮನೆಮಾಡಿಕೊಂಡು ನೆಲೆಸಬೇಕು ಎಂಬುದು ಬಹುತೇಕರ ಆಸೆ. ಅಂತಹ ಜಾಗವೊಂದಿದೆ. ಅಪರಾಧವೇ ಇಲ್ಲದ ದೇಶ ಇದು. ಇಲ್ಲಿನ ಖಾಲಿ ಜೈಲುಗಳೇ ಇದಕ್ಕೆ ದೊಡ್ಡ ಸಾಕ್ಷಿ.
ಅಪರಾಧವೇ ಇಲ್ಲದ ದೇಶ ಯಾವುದು?
ಒಂದೇ ಒಂದು ಅಪರಾಧವೂ ನಡೆಯದ ದೇಶವೊಂದಿದೆ. ನೆದರ್ಲ್ಯಾಂಡ್ಸ್ ಬಗ್ಗೆ ನೀವು ಕೂಡ ಕೇಳಿರಬೇಕು. ಈ ದೇಶವು ತನ್ನ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಅಪರಾಧ ಪ್ರಕರಣಗಳೇ ನಡೆಯದ ಕಾರಣ ಜೈಲುಗಳೆಲ್ಲ ಖಾಲಿ ಹೊಡೆಯುತ್ತಿವೆ. ಹಾಗಾಗಿ ಅವುಗಳನ್ನು ರೆಸ್ಟೋರೆಂಟ್‌ಗಳಾಗಿ ಪರಿವರ್ತಿಸುವ ಕಾರ್ಯ ಆರಂಭವಾಗಿದೆ. ನೆದರ್ಲ್ಯಾಂಡ್ಸ್‌ನ ಜೈಲುಗಳಲ್ಲಿ ಒಬ್ಬನೇ ಒಬ್ಬ ಕೈದಿಯೂ ಇಲ್ಲ. 2013 ರಿಂದಲೂ ಅಲ್ಲಿನ ಕಾರಾಗೃಹಗಳನ್ನು ಮುಚ್ಚಲಾಗುತ್ತಿದೆ. 2019ರವರೆಗೆ ಇಲ್ಲಿ ಅನೇಕ ಜೈಲುಗಳನ್ನು ಮುಚ್ಚಲಾಗಿದೆ.
ಅಪರಾಧಿಗಳಿಗೆ ಏನಾಗುತ್ತದೆ?
ನೆದರ್ಲೆಂಡ್ಸ್ ಅನ್ನು ಅಪರಾಧ ಮುಕ್ತಗೊಳಿಸುವಲ್ಲಿ ಇಲ್ಲಿನ ವ್ಯವಸ್ಥೆಯು ಉತ್ತಮ ಕೊಡುಗೆ ನೀಡಿದೆ. ಏಕೆಂದರೆ ಇಲ್ಲಿ ಕೈದಿಗಳು ಶಿಕ್ಷೆಯ ಬದಲಿಗೆ ದಂಡವನ್ನು ಪಾವತಿಸಬೇಕಾಗುತ್ತದೆ. ಕೆಲವು ಅಪರಾಧಿಗಳು ನೆದರ್ಲೆಂಡ್ಸ್ ನಡೆಸುವ ಪುನರ್ವಸತಿ ಕಾರ್ಯಕ್ರಮಗಳಿಗೆ ಹಾಜರಾಗಬೇಕಾಗುತ್ತದೆ. ಮಾಧ್ಯಮ ವರದಿಗಳ ಪ್ರಕಾರ ಕಳೆದ ಕೆಲವು ವರ್ಷಗಳಲ್ಲಿ ಇಲ್ಲಿ ಅಪರಾಧದ ಪ್ರಮಾಣವು ವೇಗವಾಗಿ ಕಡಿಮೆಯಾಗಿದೆ. ದೇಶದಲ್ಲಿ ಯಾವುದೇ ಅಪರಾಧ ನಡೆಯುತ್ತಿಲ್ಲ ಎಂಬ ಸಂತಸ ಒಂದೆಡೆಯಾದರೆ, ನೆದರ್ಲೆಂಡ್ ಸರ್ಕಾರ ಜೈಲು ನಿರ್ವಹಣೆಗೆ ಭಾರಿ ಖರ್ಚು ಮಾಡಬೇಕಿದೆ. ಇದಕ್ಕಾಗಿ ಸರ್ಕಾರವೂ ವ್ಯವಸ್ಥೆ ಮಾಡಿದೆ. ಈ ದೇಶದ ನೆರೆಯ ರಾಷ್ಟ್ರವಾದ ನಾರ್ವೆಯಲ್ಲಿ ಅಪರಾಧಿಗಳ ಸಂಖ್ಯೆ ಹೆಚ್ಚು. ಹಾಗಾಗಿ ಅಲ್ಲಿನ ಖೈದಿಗಳನ್ನು ಕರೆತಂದು ಇಲ್ಲಿನ ಜೈಲುಗಳಲ್ಲಿ ಇಡಲಾಗುತ್ತಿದೆ.