alex Certify ಕೆ.ಆರ್. ಮಾರುಕಟ್ಟೆಯಲ್ಲಿ ಬರೋಬ್ಬರಿ ಒಂದು ಟನ್ ನಿಂಬೆಹಣ್ಣು ಕದ್ದ ಖತರ್ನಾಕ್ ಖದೀಮರು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆ.ಆರ್. ಮಾರುಕಟ್ಟೆಯಲ್ಲಿ ಬರೋಬ್ಬರಿ ಒಂದು ಟನ್ ನಿಂಬೆಹಣ್ಣು ಕದ್ದ ಖತರ್ನಾಕ್ ಖದೀಮರು…..!

ಈ ಬೇಸಿಗೆಯ ಬಿರು ಬಿಸಿಲಿಗೆ ಬೇಸತ್ತ ಜನತೆ ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಅದರಲ್ಲೂ ನಿಂಬೆ ಹಣ್ಣು ಜ್ಯೂಸ್ ಕುಡಿದ್ರೆ ಆರೋಗ್ಯಕ್ಕೂ ಒಳ್ಳೆಯದು. ಹೀಗಾಗಿ ಅನೇಕರು ನಿಂಬೆಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ನಿಂಬೆಹಣ್ಣುಗಳ ಬೆಲೆಯೂ ಗಗನಕ್ಕೇರಿದೆ. ಇದೀಗ ಸಿಟ್ರಸ್ ಹಣ್ಣಿನ (ನಿಂಬೆ ಹಣ್ಣು) ಬೆಲೆ ಏರಿಕೆಯ ಲಾಭ ಪಡೆಯಲು ಮುಂದಾದ ಕಳ್ಳರು ಬೆಂಗಳೂರಿನ ಕೆಆರ್ ಮಾರುಕಟ್ಟೆಯಿಂದ ಒಂದು ಟನ್ ನಿಂಬೆಹಣ್ಣುಗಳನ್ನು ಕದ್ದಿದ್ದಾರೆ.

ಹೌದು, ಸಿಲಿಕಾನ್ ಸಿಟಿಯಲ್ಲಿ ಈ ಘಟನೆ ನಡೆದಿದೆ. ಬರೋಬ್ಬರಿ ಒಂದು ಟನ್ ನಿಂಬೆಹಣ್ಣುಗಳನ್ನು ಕಳ್ಳರು ಎಗರಿಸಿದ್ದಾರೆ. ಸಗಟು ವ್ಯಾಪಾರಿಗಳು ಶಂಕಿತ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರೆ, ನಿಂಬೆಹಣ್ಣು ಕದಿಯುವ ಪ್ರಕ್ರಿಯೆ ಮುಂದುವರೆದಿದೆ.

52 ವರ್ಷದ ವೇಲು ಎಂಬ ಮಾರಾಟಗಾರರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಏಪ್ರಿಲ್ 20 ರಂದು ರಾತ್ರಿ ಕೆಆರ್ ಮಾರುಕಟ್ಟೆ ಸಂಕೀರ್ಣದಿಂದ ಎಂಟು ಮೂಟೆ ನಿಂಬೆಹಣ್ಣುಗಳನ್ನು ಕಳವು ಮಾಡಲಾಗಿದೆ ಎಂದು ವೇಲು ಹೇಳಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ವ್ಯಾಪಾರಸ್ಥರು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಏಪ್ರಿಲ್ 20 ರಂದು ರಾತ್ರಿ 10.30 ರ ಸುಮಾರಿಗೆ ಅಂಗಡಿ ಮುಚ್ಚಿದ್ದೆವು, ಮಧ್ಯರಾತ್ರಿ ಕಳ್ಳರು ನಿಂಬೆಹಣ್ಣು ಕದ್ದೊಯ್ದರು, ಎಂಟು ಚೀಲಗಳಲ್ಲಿ ಆರು ನನ್ನದೇ ಆಗಿತ್ತು. ಬೇಸಿಗೆಯ ಬೇಡಿಕೆಯಿಂದ ನಿಂಬೆ ಹಣ್ಣಿನ ಬೆಲೆ ಗಗನಕ್ಕೇರಿದೆ. ಹೀಗಾಗಿ ಕಳ್ಳರು ಕಳವು ಮಾಡುತ್ತಿದ್ದಾರೆ ಎಂದು ವೇಲು ತಿಳಿಸಿದರು.

ವೇಲು ಅವರದ್ದಷ್ಟೇ ಅಲ್ಲ ಮುರುಗನ್, ಮಂಜು, ಮಾರಿ, ವೆಂಕಟೇಶ್ ಮತ್ತು ಗುಟ್ಟಮ್ಮ ಎಂಬುವವರಿಗೆ ಸೇರಿದ ನಿಂಬೆಹಣ್ಣುಗಳು ಸಹ ಕಳ್ಳತನವಾಗಿದೆ. ಕಳೆದ ಒಂದು ತಿಂಗಳಲ್ಲಿ ಕಳ್ಳರು 30 ಚೀಲಗಳನ್ನು ಕದ್ದಿದ್ದಾರೆ. ಪ್ರತಿ ಚೀಲದಲ್ಲಿ ಸುಮಾರು 35 ಕೆಜಿ ನಿಂಬೆಹಣ್ಣು (ಪ್ರತಿ ಚೀಲದಲ್ಲಿ ಸುಮಾರು 800 ನಿಂಬೆಹಣ್ಣು) ಪ್ರತಿ ಚೀಲದ ಬೆಲೆ ರೂ. 2,200 – 3,000 ರೂ. ಕಳ್ಳತನವಾದ ನಿಂಬೆಹಣ್ಣಿನ ಒಟ್ಟು ಬೆಲೆ ಸುಮಾರು 75,000 ರೂ. ಆಗಿದೆ.

ಚಿಲ್ಲರೆ ತರಕಾರಿ ಮಾರಾಟಗಾರರು ಗಾತ್ರ ಮತ್ತು ಪ್ರದೇಶಕ್ಕೆ ಅನುಗುಣವಾಗಿ ಪ್ರತಿ ನಿಂಬೆಯನ್ನು 3.5 ರಿಂದ 8 ರೂ.ಗೆ ಮಾರಾಟ ಮಾಡುತ್ತಾರೆ. ಅಂಗಡಿಯವರ ಪ್ರಕಾರ, ಮಾರುಕಟ್ಟೆಯಲ್ಲಿ ನಿಂಬೆಹಣ್ಣು ಕಳ್ಳತನವಾಗುತ್ತಿರುವುದು ಇದೇ ಮೊದಲು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಬೇಡಿಕೆ ಹೆಚ್ಚಿದ್ದಾಗಲೂ ಅಂತಹ ಯಾವುದೇ ಘಟನೆಗಳು ವರದಿಯಾಗಿಲ್ಲ. ವ್ಯಾಪಾರಸ್ಥರು ಮರದ ಹಲಗೆಗಳ ಮೇಲೆ ನಿಂಬೆ ಚೀಲಗಳನ್ನು ಇರಿಸಿ, ಅವುಗಳನ್ನು ಟಾರ್ಪಾಲಿನ್ ಹಾಳೆಗಳಿಂದ ಮುಚ್ಚಿ ಹಗ್ಗಗಳಿಂದ ಕಟ್ಟುತ್ತಾರೆ.

ಏಪ್ರಿಲ್ 22 ರಂದು ಫಾಲ್ ಮಂಡಿ ಬಳಿ ಕೆಲಸ ಮಾಡುತ್ತಿದ್ದ ಬಾಲಾಜಿ ಎಂಬ 26 ವರ್ಷದ ಯುವಕ ಕೆಆರ್ ಮಾರುಕಟ್ಟೆ ಬಳಿ ತಿರುಗಾಡುತ್ತಿದ್ದ. ನಿಂಬೆಹಣ್ಣಿನ ಮಾರಾಟಗಾರರು ಅವನ ಮೇಲೆ ಕಣ್ಣಿಟ್ಟಿದ್ದರು. ಹಣ್ಣಿನ ಮಾರುಕಟ್ಟೆಯ ಕಾರ್ಮಿಕರು ಸಾಮಾನ್ಯವಾಗಿ ನಮ್ಮ ಮಾರುಕಟ್ಟೆಗೆ ಬರುವುದಿಲ್ಲವಾದ್ದರಿಂದ ಏನೋ ತಪ್ಪಾಗಿದೆ ಎಂದು ನಾವು ಶಂಕಿಸಿದೆವು. ಅವನ ಬಳಿ ಹೋಗುತ್ತಿದ್ದಾಗಲೇ ಅವನು ಓಡಿಹೋಗಿ ಅಂಡರ್‌ಪಾಸ್‌ನಲ್ಲಿ ಅಡಗಿಕೊಂಡಿದ್ದ. ಬ್ಯಾಗ್ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ವೇಲು ಹೇಳಿದ್ದಾರೆ.

ಸಿಟಿ ಮಾರ್ಕೆಟ್ ಪೊಲೀಸರಿಗೆ ಕರೆ ಮಾಡಿದ ಮಾರಾಟಗಾರರು ಬಾಲಾಜಿಯನ್ನು ಅವರಿಗೆ ಒಪ್ಪಿಸಿದ್ದಾರೆ. ಕೇವಲ ನಾಲ್ಕು ಚೀಲ ನಿಂಬೆಹಣ್ಣುಗಳನ್ನು ಮಾತ್ರ ಕದ್ದು ಮಾರಿದ್ದೇನೆ. ಇತರ ಬ್ಯಾಗ್‌ಗಳು ಕಳ್ಳತನವಾಗಿರುವ ಬಗ್ಗೆ ತನಗೆ ತಿಳಿದಿಲ್ಲ ಎಂದು ಆತ ತಿಳಿಸಿದ್ದಾನೆ. ಬೇರೆ ಕಳ್ಳರನ್ನು ಹುಡುಕಲು ಇದೀಗ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...