ಹೇರ್ಸ್ಟೈಲ್ಗಾಗಿ ಸಹಸ್ರಾರು ರೂಪಾಯಿ ಖರ್ಚು ಮಾಡುವವರು ಇದ್ದಾರೆ. ಕೇಶವಿನ್ಯಾಸ ಚೆನ್ನಾಗಿದ್ದರೆ, ಸುಂದರವಾಗಿ ಕಾಣುತ್ತಾರೆ ಎನ್ನುವ ಮಾತಿದೆ. ಇದೇ ಕಾರಣಕ್ಕೆ ಗಂಟೆಗಟ್ಟಲೆ ಕೂತು ವಿವಿಧ ಬಗೆಯ ಕೇಶ ವಿನ್ಯಾಸ ಮಾಡಿಕೊಳ್ಳುತ್ತಾರೆ.
ಆದರೆ ನಿಮಗೆ ಗೊತ್ತೆ? ತರಾತುರಿಯಲ್ಲಿ ಕಟ್ಟಿದ ಸರಳ ಪೋನಿಟೇಲ್ ಅಷ್ಟೇ ವೈರಲ್ ಆಗಿವೆ ! ಹೌದು, ಗಂಟೆಗಟ್ಟಲೆ ಕೂದಲನ್ನು ಸ್ಟ್ರೈಟ್ ಮಾಡಲು ಏಕೆ ವ್ಯಯಿಸುತ್ತೀರಿ ಎಂದು ಪ್ರಶ್ನಿಸುವ ರೀತಿಯಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವರ್ಷದ ಆರಂಭದಲ್ಲಿ ಕಾಣಿಸಿಕೊಂಡ ಬೆಡ್‌ಹೆಡ್ ಕೂದಲಿನ ಪ್ರವೃತ್ತಿಯು ಕ್ಯಾಲಿಫೋರ್ನಿಯಾದ ಇಂಡಿಯೊದಲ್ಲಿ ಹರಡಿದೆ. ಐರಿನಾ ಶೇಕ್‌ನಿಂದ ಹಿಡಿದು ಕ್ಯಾಮಿಲಾ ಕ್ಯಾಬೆಲ್ಲೊ ಮತ್ತು ಜೆನ್ನಾ ಒರ್ಟೆಗಾವರೆಗೆ, ಪ್ರತಿಯೊಬ್ಬರೂ ಈ ರೀತಿ ಮನೆಯಲ್ಲಿ ಇರುವಂತೆ ಕೇಶವಿನ್ಯಾಸ ಮಾಡಿಕೊಂಡು ಫೋಟೋಶೂಟ್ ಮಾಡಿಸಿಕೊಂಡಿದಾರೆ. ಇದಕ್ಕೆ ಬೆಡ್‌ಹೆಡ್ ಎಂದು ಹೇಳಲಾಗುತ್ತಿದೆ.
ನಿಮ್ಮ ಕೂದಲನ್ನು ಸ್ಟೈಲಿಂಗ್ ಮಾಡಲು ಸಮಯ ವ್ಯಯ ಮಾಡುವುದು ಬೇಡ. ಮನೆಯಲ್ಲಿ ತುರುಬು ಕಟ್ಟುವಂತೆ ಇದ್ದರೂ ಸುಂದರವಾಗಿ ಕಾಣಬಹುದು ಎಂದು ಹೇಳುವುದು ಇವರ ಉದ್ದೇಶ. ಈ ಸೆಲೆಬ್ರಿಟಿಗಳ ಹೊಸ ಲುಕ್ ಸಾಮಾನ್ಯ ಜನರಿಗಂತೂ ತುಂಬಾ ಖುಷಿ ಕೊಟ್ಟಿದೆ.