ಹುಬ್ಬೇರಿಸುವಂತಿದೆ ಜೂನಿಯರ್ ಎನ್.ಟಿ.ಆರ್. ಚಿತ್ರದಲ್ಲಿ ನಟಿಸಲು ಜಾಹ್ನವಿ ಪಡೆದಿರುವ ಸಂಭಾವನೆ….!

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಹೆಚ್ಚಿನ ಚಿತ್ರಗಳಲ್ಲೇನು ನಟಿಸಿಲ್ಲ. ಅಲ್ಲದೆ ಖ್ಯಾತನಾಮ ನಟರೊಂದಿಗೂ ಕಾಣಿಸಿಕೊಂಡಿಲ್ಲ. ಆದರೆ ಸಂಭಾವನೆ ವಿಚಾರದಲ್ಲಿ ಮಾತ್ರ ಜಾಹ್ನವಿ ಕಪೂರ್ ಇತರೆ ಬಾಲಿವುಡ್ ನಟಿಯರ ಸರಿ ಸಮಾನವಾಗಿ ನಿಂತಿದ್ದಾರೆ.

ಹೌದು, ಇದೀಗ ಖ್ಯಾತ ನಟ ಜೂನಿಯರ್ ಎನ್.ಟಿ.ಆರ್. ಅವರ ಮುಂದಿನ ಚಿತ್ರದಲ್ಲಿ ಜಾಹ್ನವಿ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದ್ದು, ಕೊರಟಾಲ ಶಿವ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದೆ.

ಈ ಚಿತ್ರಕ್ಕೆ ಜಾಹ್ನವಿ ಕಪೂರ್ ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದ್ದು, ಇದು ಟಾಲಿವುಡ್ ಚಿತ್ರರಂಗ ಅಚ್ಚರಿಗೊಳಗಾಗುವಂತೆ ಮಾಡಿದೆ. ಆರ್ ಆರ್ ಆರ್ ಭರ್ಜರಿ ಯಶಸ್ಸಿನ ಬಳಿಕ ಜೂನಿಯರ್ ಎನ್.ಟಿ.ಆರ್. ಅವರ ಈ ಚಿತ್ರ ಕೂಡ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆಯನ್ನು ಹುಟ್ಟು ಹಾಕಿದೆ.

NTR 30: NTR Jr, Janhvi Kapoor kick off their new film 'NTR 30' with a grand  opening ceremony - The Economic Times

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read