SHOCKING: ಮೊಬೈಲ್ ಫೋನ್ ಸ್ಫೋಟ: ಬಾಲಕಿ ದಾರುಣ ಸಾವು

ತ್ರಿಶ್ಯೂರು: ಕೇರಳದ ತ್ರಿಶೂರು ಸಮೀಪದ ತಿರುವಿಲ್ವಮಲದಲ್ಲಿ ಮೊಬೈಲ್ ಫೋನ್ ಸ್ಪೋಟಗೊಂಡು 8 ವರ್ಷದ ಬಾಲಕಿ ದಾರುಣವಾಗಿ ಸಾವನ್ನಪ್ಪಿದ್ದಾಳೆ.

ಆದಿತ್ಯಶ್ರೀ ಮೃತಪಟ್ಟ ಬಾಲಕಿ. ಮೂರನೇ ತರಗತಿ ಓದುತ್ತಿದ್ದ ಆದಿತ್ಯ ಸೋಮವಾರ ರಾತ್ರಿ 10.30 ಕ್ಕೆ ಶ್ರೀ ಪೋಷಕರ ಮೊಬೈಲ್ ಫೋನ್ ನಲ್ಲಿ ಆಟ ಆಡುತ್ತಿದ್ದ ವೇಳೆ ಅದು ಏಕಾಏಕಿ ಸ್ಪೋಟಗೊಂಡಿದೆ. ಸ್ಥಳದಲ್ಲಿಯೇ ಆದಿತ್ಯಶ್ರೀ ಸಾವನ್ನಪ್ಪಿದ್ದಾಳೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪೋಲೀಸರ ಪ್ರಕಾರ, ಫೋನ್‌ನ ದೀರ್ಘಕಾಲದ ಬಳಕೆಯಿಂದಾಗಿ ಬ್ಯಾಟರಿಯು ಹೆಚ್ಚು ಬಿಸಿಯಾಗುವುದು ಸ್ಫೋಟಕ್ಕೆ ಕಾರಣವಾಗಬಹುದು. ಆಕೆಯ ಕೈಯಲ್ಲಿದ್ದ ಮೊಬೈಲ್ ಫೋನ್ ಸ್ಫೋಟಗೊಂಡಿದ್ದರಿಂದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟಕ್ಕೆ ನಿಖರವಾದ ಕಾರಣವನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ ಮತ್ತು ಫೋನ್‌ನ ಫೋರೆನ್ಸಿಕ್ ಪರೀಕ್ಷೆಯ ನಂತರ ಇದನ್ನು ಮಾಡಲಾಗುತ್ತದೆ. ಸ್ಫೋಟದ ಪರಿಣಾಮ ತೀವ್ರವಾಗಿತ್ತು. ಆಕೆಯ ಬಲ ಅಂಗೈ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read