ಬೆಂಗಳೂರು: ವಿಸಿ ನಾಲೆಯಲ್ಲಿ ಈಜಲು ಇಳಿದಿದ್ದ ಐವರು ನೀರು ಪಾಲಾಗಿರುವ ಘಟನೆ ಮಂಡ್ಯ ಜಿಲ್ಲೆಯ ದೊಡ್ಡ ಕೊತ್ತಗೆರೆ ಗ್ರಾಮದ ಬಳಿ ನಡೆದಿದೆ.
ಮೃತ ಐವರು ಬೆಂಗಳೂರಿನ ನೀಲಸಂದ್ರ ಮೂಲದವರಾಗಿದ್ದಾರೆ. ರಂಜಾನ್ ಬಳಿಕ ಹಲ್ಲಗೆರೆ ಗ್ರಾಮದ ಅಜ್ಜಿ ಮನೆಗೆಂದು ಬಂದಿದ್ದರು. ಈಜಲು ವಿಸಿ ನಾಲೆಗೆ ಇಳಿದಿದ್ದರು. ಈ ವೇಳೆ ದುರಂತ ಸಂಭವಿಸಿದೆ.
ಮೆಹತಾ (10), ಅನಿಷಾ ಬೇಗಂ (34), ತಸ್ಮಿಯಾ (22), ಅಶ್ರಕ್ (28), ಅತೀಕ್ (22) ಮೃತರು. ಮೂವರ ಮೃತ ದೇಹವನು ಅಗ್ನಿಶಾಮಕ ಸಿಬ್ಬಂದಿಗಳು ಹೊರತೆಗೆದಿದ್ದು, ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಬಸರಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.