ಮಂಡ್ಯ: ಪದೇ ಪದೇ ಅಂಬರೀಶ್ ಮೃತದೇಹವನ್ನು ಮಂಡ್ಯಕ್ಕೆ ತಂದ ವಿಚಾರವನ್ನು ಮಾತನಾಡುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕೆಂಡಕಾರಿರುವ ಸಂಸದೆ ಸುಮಲತಾ, ತುಂಬಾ ಹೇಸಿಗೆ ಅನಿಸುತ್ತಿದೆ ಕುಮಾರಸ್ವಾಮಿಯವರ ಈ ರೀತಿ ಮಾತುಗಳು ಎಂದು ಗುಡುಗಿದ್ದಾರೆ.
ಅಂಬರೀಶ್ ಅವರಿಗೆ ಗೌರವ ಸಿಕ್ಕಿದ್ದು ಒಬ್ಬ ನಾಯಕನಿಂದ ಅಲ್ಲ. ರಾಜ್ಯದ ಜನತೆ ಅವರಿಗೆ ಗೌರವದ ಸ್ಥಾನ ಮಾನ ಕೊಟ್ಟಿದ್ದಾರೆ. ನಾನೇ ನಾನೇ ಎಂದು ಕುಮಾರಸ್ವಾಮಿ ಹೇಳೋದು ಅವರಿಗೆ ಸೋಭೆ ತರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ದ್ವೇಷದ ರಾಜಕಾರಣ ಮಾಡುತ್ತಿರುವವರು ಯಾರು? ನಾನಾ ಅವರಾ? ಜನ ಎಲ್ಲವನ್ನು ನೋಡಿಕೊಂಡು ಬಂದಿದ್ದಾರೆ. ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಕುಮಾರಸ್ವಾಮಿ ಜನರ ದಾರಿ ತಪ್ಪಿಸಲು ಹೊರಟಿದ್ದಾರೆ. ದ್ವೇಷದ ರಾಜಕಾರಣವನ್ನು ಅವರು ಹಾಗೂ ಅವರ ಕಡೆಯವರು ಮಾಡುತ್ತಾ ಬಂದಿರುವುದು. ಅಂಬರೀಷ್ ಹಾಗೂ ಕುಟುಂಬ ಪ್ರೀತಿಯಿಂದಲೇ ಜನರ ಮನ ಗೆದ್ದಿದೆ. ಹಿಂದಿನ ರೆಕಾರ್ಡ್ ನೋಡಿಕೊಂಡು ಮಾತನಾಡಲಿ ಎಂದು ಗರಂ ಆಗಿದ್ದಾರೆ.