ನೆಟ್ಟಿಗರನ್ನು ಭಾವುಕರನ್ನಾಗಿಸುತ್ತೆ ಅಪ್ಪ-ಅಮ್ಮನಿಗೆ ನೆರವಾಗುತ್ತಿರುವ ಬಾಲಕನ ವಿಡಿಯೊ

ನಾವು ಜೀವನದಲ್ಲಿ ಮಾಡುವ ಸಣ್ಣ ಪುಟ್ಟ ಕೆಲಸಗಳಿಂದ ಸಿಗುವ ಸಣ್ಣ ಪುಟ್ಟ ಖುಷಿಗಳೇ ಜೀವನ ಪ್ರೀತಿಯನ್ನು ಹೆಚ್ಚಿಸುವ ವಿಚಾರಗಳಾಗಿವೆ. ಬಾಲ್ಯದಿಂದ ದೊಡ್ಡವರಾಗುವವರೆಗೂ ನಮ್ಮ ಹೆತ್ತವರಿಗೆ ಸಣ್ಣಪುಟ್ಟ ಕೆಲಸಗಳಲ್ಲಿ ನೆರವಾಗುವುದನ್ನು ನೆನೆಸಿಕೊಳ್ಳುವುದು ಅದೆಷ್ಟು ಹಿತ ನೀಡುವ ಅನುಭವ ಅಲ್ಲವೇ?

ಮನಮುಟ್ಟುವ ಘಟನೆಯೊಂದರಲ್ಲಿ ಪುಟಾಣಿ ಬಾಲಕನೊಬ್ಬ ತನ್ನ ಅಪ್ಪ-ಅಮ್ಮ ಇದ್ದ ಬೈಸಿಕಲ್‌ಅನ್ನು ಅಪ್ ಏರಿಸಲು ತಳ್ಳಿ ನೆರವಾಗುತ್ತಿರುವ ವಿಡಿಯೋವನ್ನು
ಐಎಎಸ್ ಅಧಿಕಾರಿ ಅವನೀಶ್ ಶರಣ್ ಶೇರ್‌ ಮಾಡಿದ್ದಾರೆ.

ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕರ್‌ ಒಬ್ಬರು ಈ ವಿಡಿಯೋ ಸೆರೆ ಹಿಡಿದಿದ್ದಾರೆ. ಹಿನ್ನೆಲೆಯಲ್ಲಿ ಆರ್ಜಿತ್‌ ಸಿಂಗ್‌ರ ಮುಸ್ಕುರಾನೆ ಹಾಡನ್ನು ಹಾಕಲಾಗಿದೆ.

“ಇದೇ ರೀತಿ ನಿಮ್ಮ ಜೀವನದುದ್ದಕ್ಕೂ ನಿಮ್ಮ ಹೆತ್ತವರಿಗೆ ಬೆಂಬಲವಾಗಿ ನಿಲ್ಲಿ,” ಎಂದು ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ ಅವನೀಶ್ ಶರಣ್.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read