ಒಡಿಶಾ: 70 ವರ್ಷದ ವೃದ್ಧೆಯೊಬ್ಬರು ಪಿಂಚಣಿ ಹಣ ಪಡೆಯಲು ಮುರಿದ ಪ್ಲಾಸ್ಟಿಕ್ ಕುರ್ಚಿಯನ್ನು ಆಸರೆಯಾಗಿ ಬಳಸಿ ನಡೆಯುತ್ತಾ ಸಾಗಿರುವ ವಿಡಿಯೋ ವೈರಲ್ ಆಗಿದೆ. ಒಡಿಶಾದ ನಬರಂಗಪುರದ 70 ವರ್ಷದ ಸೂರ್ಯ ಹರಿಜನ್ ಸುಡುವ ಬಿಸಿಲಿನಲ್ಲೇ ಬರಿಗಾಲಿನಲ್ಲಿ ಹಲವಾರು ಕಿಲೋಮೀಟರ್ ನಡೆದು ಪಿಂಚಣಿ ಹಣ ಸಂಗ್ರಹಿಸಿದ್ದಾರೆ.
ಮೊದಲು ಹಣವನ್ನು ನಗದು ರೂಪದಲ್ಲಿ ನೀಡಲಾಗುತ್ತಿತ್ತು. ಹೀಗಾಗಿ ಬ್ಯಾಂಕ್ ಗೆ ಹೋಗಿಯೇ ಹಣ ಸ್ವೀಕರಿಸಬೇಕಾಗಿತ್ತು. ಇದೀಗ ಸರ್ಕಾರವು ಫಲಾನುಭವಿಗಳ ಖಾತೆಗಳಿಗೆ ಮೊತ್ತವನ್ನು ವರ್ಗಾಯಿಸುತ್ತದೆ. ಇನ್ಮುಂದೆ ವೃದ್ಧೆ ಈ ರೀತಿ ಬರಬೇಕಾಗಿಲ್ಲ ಎಂದು ಬ್ಯಾಂಕ್ ಮ್ಯಾನೇಜರ್ ಭರವಸೆ ನೀಡಿದ್ದು, ಆಕೆಗೆ ಇಂತಹ ಸಮಸ್ಯೆಗಳು ಎದುರಾಗದಂತೆ ಕ್ರಮಕೈಗೊಳ್ಳಲಾಗಿದೆ ಎಂದಿದ್ದಾರೆ.
ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕ್ಗೆ ಬರಲು ಸಾಧ್ಯವಾಗದ ಪಿಂಚಣಿದಾರರು ತಮ್ಮ ಜೀವನ್ ಪ್ರಮಾಣ ಪತ್ರದ ಪ್ರತಿಯನ್ನು ಬ್ಯಾಂಕ್ಗೆ ಸಲ್ಲಿಸಬಹುದು ಅಥವಾ ಸೌಲಭ್ಯಗಳನ್ನು ಪಡೆಯಲು ವೆಬ್ಸೈಟ್ನಿಂದ ಪತ್ರದ ಪ್ರತಿಯನ್ನು ಬಳಸಬಹುದು.