HomeKarnatakaBIG NEWS: ಪ್ರೀತಂ ಗೌಡ ಕಂಟಕಪ್ರಾಯ, ಅವರನ್ನು ಸೋಲಿಸಲೇಬೇಕು; ಹಾಸನದಲ್ಲಿ ದೇವೇಗೌಡ್ರ ಗುಡುಗು

BIG NEWS: ಪ್ರೀತಂ ಗೌಡ ಕಂಟಕಪ್ರಾಯ, ಅವರನ್ನು ಸೋಲಿಸಲೇಬೇಕು; ಹಾಸನದಲ್ಲಿ ದೇವೇಗೌಡ್ರ ಗುಡುಗು

ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬ ಮುಂದಾಗಿದೆ. ಕುಟುಂಬದ ಸದಸ್ಯರೆಲ್ಲರೂ ಇಂದು ಬೃಹತ್ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಖುದ್ದು ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರು ಪ್ರಚಾರದ ಅಖಾಡಕ್ಕಿಳಿದಿದ್ದಾರೆ. ಹಾಸನದಲ್ಲಿ ಬೃಹತ್ ರೋಡ್ ಶೋ ಮಾಡಿದ ಮಾಜಿ ಪ್ರಧಾನಿ ದೇವೇಗೌಡರು, ಪ್ರೀತಂಗೌಡ ಕಂಟಕಪ್ರಾಯ, ಅವರನ್ನು ಹಾಸನದಿಂದ ತೆಗೆಯಲೇಬೇಕು ಎಂದು ವಾಗ್ದಾಳಿ ನಡೆಸಿದರು.

ಸ್ವರೂಪ್ ಗೆಲ್ಲಲೇಬೇಕು, ಪ್ರೀತಂಗೌಡ ಸೋಲಲೇಬೇಕು. ನಮ್ಮ ಇಡೀ ಕುಟುಂಬ ಇಲ್ಲಿ ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಬಿಜೆಪಿ ಅಭ್ಯರ್ಥಿ ವಿರುದ್ಧ ದೇವೇಗೌಡರು ತೀವ್ರ ವಾಗ್ದಾಳಿ ನಡೆಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೃಹತ್ ರೋಡ್ ಶೋ ವೇಳೆ ದೇವೇಗೌಡರು ಸೇರಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಮಂತ್ರಿ ಹೆಚ್.ಡಿ. ರೇವಣ್ಣ, ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಹಾಜರಿದ್ದರು. ಬೃಹತ್ ರೋಡ್ ಶೋ ಮೂಲಕ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ನಾಮಪತ್ರ ಸಲ್ಲಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular