
ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರತಾಪ್ ಸಿಂಹ, ಹದಿನೇಳು ಓಟು ? ಅಣ್ಣ ತಮ್ಮ ನಿನ್ನ ಹೆಸರು ಮೋಹನ್ನಾ ಮಹಮ್ಮದ್ದಾ ಎಂದು ವ್ಯಂಗ್ಯವಾಗಿ ಕೇಳಿದ್ದರು.
ಈಗ ಇದೇ ಟ್ವೀಟ್ ಇಟ್ಟುಕೊಂಡು ಕಾಂಗ್ರೆಸ್, ಪ್ರತಾಪ್ ಸಿಂಹ ಅವರಿಗೆ ಟಾಂಗ್ ನೀಡಿದೆ. ಮೂರ್ಖತನ ಮತ್ತು ಅವಿವೇಕತನನಕ್ಕೆ ಇನ್ನೊಂದು ಹೆಸರೇ ಪ್ರತಾಪ್ ಸಿಂಹ ಎಂದು ಗೇಲಿ ಮಾಡಿದೆ.
ಅಲ್ಲದೇ, ಪ್ರತಾಪ್ ಸಿಂಹ ಅವರೇ, ನಿಮಗೆ ಅರ್ಹತೆ ಇದೆಯೋ ಇಲ್ಲವೋ ಅಂತೂ ನೀವು ಸಂಸದರಾಗಿದ್ದೀರಿ. ಕಡೇ ಪಕ್ಷ ಆ ಜವಾಬ್ದಾರಿ ಅರಿತು ಮಾತನಾಡಿ. ಮಾತೆತ್ತಿದರೆ ಸಂಸ್ಕೃತಿ ಸಂಸ್ಕಾರದ ಪಾಠ ಮಾಡುವ ನಿಮಗೆ ಹಿಂದೂ ‘ಅವಿಭಕ್ತ’ ಕುಟುಂಬಗಳ ಪರಿಚಯ ಇಲ್ಲದಿರುವುದು ಆಶ್ಚರ್ಯವೇ ಸರಿ. ಅವಿಭಕ್ತ ಕುಟುಂಬಗಳು ನಿಮ್ಮ ಪ್ರಕಾರ ಹಿಂದೂಗಳಲ್ಲವೇ ? ಎಂದು ಪ್ರಶ್ನಿಸಿದೆ.