ಕರೆನ್ಸಿ ಪರಿವರ್ತನೆಯ ಪ್ರಮಾದದಿಂದಾಗಿ ಜಪಾನ್ ನ ಆಲ್ ನಿಪ್ಪಾನ್ ಏರ್‌ವೇಸ್ (ANA) ಆಕಸ್ಮಿಕವಾಗಿ ನೂರಾರು ಟಿಕೆಟ್‌ಗಳನ್ನು ಭಾರೀ ರಿಯಾಯಿತಿ ದರದಲ್ಲಿ ಮಾರಾಟ ಮಾಡಿದೆ.
ಬ್ಲೂಮ್‌ಬರ್ಗ್ ವರದಿ ಮಾಡಿದಂತೆ ಪ್ರಯಾಣಿಕರು ಜಕಾರ್ತದಿಂದ ಕೆರಿಬಿಯನ್ ದ್ವೀಪಗಳಿಗೆ $890 (ಅಂದಾಜು ರೂ. 73,000) ಗಿಂತ ಕಡಿಮೆ ದರದಲ್ಲಿ ರೌಂಡ್-ಟ್ರಿಪ್ ಪ್ರಥಮ ದರ್ಜೆ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಯಿತು. ಈ ಟಿಕೆಟ್‌ಗಳ ಬೆಲೆ ಸಾಮಾನ್ಯವಾಗಿ ಸುಮಾರು 20 ಪಟ್ಟು ಹೆಚ್ಚು.
ವರದಿಗಳ ಪ್ರಕಾರ ಪ್ರಯಾಣಿಕರು ಬ್ಯುಸಿನೆಸ್ ಕ್ಲಾಸ್ ಟಿಕೆಟ್‌ಗಳನ್ನು $300 (ಅಂದಾಜು ರೂ. 25,000) ಕ್ಕೆ ಪಡೆದುಕೊಂಡಿದ್ದಾರೆ. ಅನೇಕರು ಟಿಕೆಟ್‌ಗಳಿಗೆ ಸಾಮಾನ್ಯ ಬೆಲೆಯಾದ $10,000 (ಅಂದಾಜು ರೂ 8.21 ಲಕ್ಷ) ಬದಲಿಗೆ ಕೆಲವೇ ನೂರು ಡಾಲರ್‌ಗಳನ್ನು ಪಾವತಿಸಿದ್ದಾರೆ. ಎಷ್ಟು ಗ್ರಾಹಕರು ರಿಯಾಯಿತಿ ಟಿಕೆಟ್‌ಗಳನ್ನು ಖರೀದಿಸಿದ್ದಾರೆ ಎಂಬುದನ್ನು ಆಲ್ ನಿಪ್ಪಾನ್ ಏರ್‌ವೇಸ್ ಬಹಿರಂಗಪಡಿಸಿಲ್ಲ.
ಆಲ್ ನಿಪ್ಪಾನ್ ಏರ್‌ವೇಸ್ ರಿಯಾಯಿತಿ ಟಿಕೆಟ್‌ಗಳನ್ನು ಗೌರವಿಸುತ್ತದೆ ಎಂದು ಏರ್‌ಲೈನ್‌ನ ವಕ್ತಾರರು ಹೇಳಿದ್ದಾರೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ವರದಿಗಳ ಪ್ರಕಾರ ತಿಂಗಳ ಅಂತ್ಯದ ವೇಳೆಗೆ ನಿರ್ಧಾರ ತೆಗೆದುಕೊಳ್ಳಲಾಗುವುದೆಂದು ತಿಳಿದುಬಂದಿದೆ.
ನಿರ್ಧಾರವನ್ನು ಅಂತಿಮಗೊಳಿಸುವ ಮೊದಲು ವಿಮಾನಯಾನ ಮಾಡುವ ಪ್ರಯಾಣಿಕರಿಗೆ ರಿಯಾಯಿತಿ ಟಿಕೆಟ್‌ಗಳು ಮಾನ್ಯವಾಗಿರುತ್ತವೆ ಎಂದು ಆಲ್ ನಿಪ್ಪಾನ್ ಏರ್‌ವೇಸ್ ವಿವರಿಸಿದೆ.
ತನ್ನ ವಿಯೆಟ್ನಾಂ ವೆಬ್‌ಸೈಟ್‌ನಲ್ಲಿನ ದೋಷದಿಂದಾಗಿ ಕರೆನ್ಸಿ ಪರಿವರ್ತನೆಯಲ್ಲಿ ಪ್ರಮಾದಗಳಿಗೆ ಕಾರಣವಾಯಿತು ಎಂದು ANA ಹೇಳಿದೆ. ವಿಮಾನಯಾನ ಸಂಸ್ಥೆಯು ದೋಷದ ಕಾರಣ ಮತ್ತು ಅದರ ಹಾನಿಯ ಗಾತ್ರವನ್ನು ತನಿಖೆ ಮಾಡುತ್ತಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.