HomeKarnatakaBIG NEWS: ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ ಜೆ.ಪಿ. ನಡ್ಡಾ, ಕಿಚ್ಚ ಸುದೀಪ್; ಮೈಸೂರು ಪೇಟ...

BIG NEWS: ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ ಜೆ.ಪಿ. ನಡ್ಡಾ, ಕಿಚ್ಚ ಸುದೀಪ್; ಮೈಸೂರು ಪೇಟ ತೊಡಿಸಿ ಸ್ವಾಗತಿಸಿದ ಸಿಎಂ

ಶಿಗ್ಗಾಂವಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಭರ್ಜರಿ ಶಕ್ತಿ ಪ್ರದರ್ಶನದ ಮೂಲಕ ಇಂದು ಎರಡನೇ ಬಾರಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಸಿಎಂ ಬೊಮ್ಮಾಯಿ ಅವರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ನಟ ಕಿಚ್ಚ ಸುದೀಪ್ ಸಾಥ್ ನೀಡಲಿದ್ದಾರೆ.

ಈಗಾಗಲೇ ಒಂದೇ ಹೆಲಿಕಾಪ್ಟರ್ ನಲ್ಲಿ ಶಿಗ್ಗಾಂವಿಗೆ ಜೆ.ಪಿ.ನಡ್ಡಾ ಹಾಗೂ ಕಿಚ್ಚ ಸುದೀಪ್ ಆಗಮಿಸಿದ್ದು, ಶಿಗ್ಗಾಂವಿಯಲ್ಲಿರುವ ಸಿಎಂ ಬಸವರಾಜ್ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಅವರಿಗೆ ಪೇಟ, ಏಲಕ್ಕಿ ಹಾರ ತೊಡಿಸಿ ಸನ್ಮಾನಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ನಟ ಕಿಚ್ಚ ಸುದೀಪ್ ಅವರಿಗೆ ಮೈಸೂರು ಪೇಟ, ಹಾರ ಹಾಕಿ ಸನ್ಮಾನಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಎಂ ಬೊಮ್ಮಾಯಿ ರೋಡ್ ಶೋ ನಲ್ಲಿ ಭಾಗಿಯಾಗಲಿರುವ ನಟ ಕಿಚ್ಚ ಸುದೀಪ್ ನೋಡಲು ಶಿಗ್ಗಾಂವಿಗೆ ಜನಸಾಗರೇ ಹರಿದು ಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular