ಲಖನೌ: ಮಾಫಿಯಾ ಡಾನ್ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ರನ್ನು ಕೊಂದ ಮೂವರು ದುಷ್ಕರ್ಮಿಗಳು ವಿಡಿಯೋ ಕ್ಯಾಮೆರಾಗಳು, ಮೈಕ್ ಮತ್ತು ಮಾಧ್ಯಮ ಗುರುತಿನ ಚೀಟಿಗಳನ್ನು ಹಿಡಿದುಕೊಂಡು ಪತ್ರಕರ್ತರಂತೆ ಪೋಸ್ ನೀಡಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ಭಾನುವಾರ ತಿಳಿಸಿದ್ದಾರೆ.
ವಿಶೇಷ ಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ನೀಡಿದ ಹೇಳಿಕೆಯ ಪ್ರಕಾರ, ದಾಳಿಕೋರರು ಮೇಡ್ ಇನ್-ಟರ್ಕಿಯೆ ಪಿಸ್ತೂಲ್ಗಳನ್ನು ಬಳಸಿದರು ಮತ್ತು ಇಬ್ಬರ ಮೇಲೆ ಪಾಯಿಂಟ್-ಬ್ಲಾಂಕ್ ರೇಂಜ್ನಿಂದ ಮನಬಂದಂತೆ ಗುಂಡು ಹಾರಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಗ್ಯಾಂಗ್ಸ್ಟರ್ ದೇಹದಲ್ಲಿ ಕನಿಷ್ಠ 9 ಬುಲೆಟ್ ಹೊಕ್ಕಿದ್ದವು. ಆತನ ಸಹೋದರ ಅಶ್ರಫ್ ಅಹ್ಮದ್ ದೇಹದಿಂದ 5 ಗುಂಡುಗಳನ್ನು ಹೊರತೆಗೆಯಲಾಗಿದೆ ಎಂದು ವರದಿಯಾಗಿದೆ.
ಅತೀಕ್ ಅಹ್ಮದ್ ತಲೆಗೆ ಒಂದು, ಎದೆ ಹಾಗೂ ಬೆನ್ನಿನ ಭಾಗಕ್ಕೆ ಎಂಟು ಬಾರಿ ಗುಂಡು ಹಾರಿಸಿರುವುದು ಶವಪರೀಕ್ಷೆಯಲ್ಲಿ ಪತ್ತೆಯಾಗಿದೆ. ಮೂವರು ಶೂಟರ್ಗಳನ್ನು ಪೊಲೀಸರು ಬಂಧಿಸಿದ್ದಾರೆ. ಐವರು ವೈದ್ಯರಿದ್ದ ತಂಡ ಮರಣೋತ್ತರ ಪರೀಕ್ಷೆ ನಡೆಸಿದೆ.