ಶೆಟ್ಟರ್ – ಸವದಿ ಪಕ್ಷ ತೊರೆದ ಬೆನ್ನಲ್ಲೇ ಬದಲಾಯ್ತು ಬಿಜೆಪಿ ಲೆಕ್ಕಾಚಾರ; ಲಿಂಗಾಯಿತ ಸಮುದಾಯದವರೇ ಮುಂದಿನ ಸಿಎಂ ಎಂದ ನಳಿನ್ ಕುಮಾರ್

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ಹಲವರ ಹೆಸರು ಕೇಳಿ ಬಂದಿತ್ತು. ಇದರಲ್ಲಿ ಎಷ್ಟು ನಿಜವಿತ್ತೋ ಗೊತ್ತಿಲ್ಲ. ಆದರೆ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಅವರಂತಹ ಲಿಂಗಾಯಿತ ಸಮುದಾಯದ ಪ್ರಭಾವಿ ನಾಯಕರು ಬಿಜೆಪಿ ತೊರೆದ ಬಳಿಕ ರಾಜಕೀಯ ಲೆಕ್ಕಾಚಾರವೇ ಬದಲಾಗಿ ಹೋಗಿದೆ.

ಇವರಿಬ್ಬರ ಪಕ್ಷ ಸೇರ್ಪಡೆಯಿಂದ ಹುಮ್ಮಸ್ಸು ಪಡೆದುಕೊಂಡಿರುವ ಕಾಂಗ್ರೆಸ್, ವೀರೇಂದ್ರ ಪಾಟೀಲ್ ಬಳಿಕ ಮತ್ತೆ ಲಿಂಗಾಯತ ಸಮುದಾಯದ ಒಲವು ಪಕ್ಷದ ಕಡೆ ತಿರುಗಬಹುದೆಂಬ ಲೆಕ್ಕಾಚಾರದಲ್ಲಿ ಬಿಜೆಪಿ, ಲಿಂಗಾಯತರನ್ನು ನಿರ್ಲಕ್ಷ್ಯ ಮಾಡಿದೆ ಎಂಬ ವಿಚಾರವನ್ನೇ ಹೈಲೈಟ್ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ಈಗ ನಳಿನ್ ಕುಮಾರ್ ಮುಂದಿನ ದಿನಗಳಲ್ಲೂ ಬಿಜೆಪಿಯಿಂದ ಲಿಂಗಾಯತ ಸಮುದಾಯದವರೇ ಮುಖ್ಯಮಂತ್ರಿಗಳಾಗಲಿದ್ದಾರೆ ಎಂಬ ಮಾತುಗಳನ್ನಾಡಿದ್ದಾರೆ.

ಅಲ್ಲದೆ ಬಿಜೆಪಿ ಜೊತೆ ಗಟ್ಟಿಯಾಗಿ ನಿಂತಿರುವ ಲಿಂಗಾಯತ ಸಮುದಾಯದ ಮತ ಚದುರದಂತೆ ನೋಡಿಕೊಳ್ಳುವ ಸಲುವಾಗಿ ಅದೇ ಸಮುದಾಯದ ಪ್ರಮುಖ ನಾಯಕ ಯಡಿಯೂರಪ್ಪನವರನ್ನೇ ಹೇಳಿಕೆ ನೀಡುವ ಸಲುವಾಗಿ ಬಿಜೆಪಿ ಪ್ರೊಜೆಕ್ಟ್ ಮಾಡುತ್ತಿದೆ. ಅಲ್ಲದೆ ಶೆಟ್ಟರ್, ಸವದಿ ವಿರುದ್ಧ ಬಿಜೆಪಿಯ ಲಿಂಗಾಯತ ಸಮುದಾಯದ ನಾಯಕರೇ ವಾಗ್ದಾಳಿ ನಡೆಸುವಂತೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ. ಈ ಎಲ್ಲ ವಿದ್ಯಮಾನಗಳು ಚುನಾವಣೆ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read