alex Certify ಪ್ರೆಶರ್‌ ಕುಕ್ಕರ್‌ನ ಸೋರಿಕೆ ತಡೆಯಲು ಇಲ್ಲಿದೆ ಸುಲಭದ ಟಿಪ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೆಶರ್‌ ಕುಕ್ಕರ್‌ನ ಸೋರಿಕೆ ತಡೆಯಲು ಇಲ್ಲಿದೆ ಸುಲಭದ ಟಿಪ್ಸ್‌

ಪ್ರೆಶರ್ ಕುಕ್ಕರ್ ಇಲ್ಲದೇ ಅಡುಗೆ ಮಾಡುವುದೇ ಅಸಾಧ್ಯ ಎಂಬ ಸ್ಥಿತಿ ಬಹುತೇಕ ಮನೆಗಳಲ್ಲಿದೆ. ಕುಕ್ಕರ್‌ ಇಲ್ಲದೆ ಚುರುಕಾಗಿ ಅಡುಗೆ ಮಾಡಲು ಕೂಡ ಸಾಧ್ಯವಿಲ್ಲ. ಬೇಳೆ, ತರಕಾರಿ ಬೇಯಿಸುವುದು, ಅನ್ನ ಮಾಡುವುದು ಹೀಗೆ ಅನೇಕ ಪಾಕವಿಧಾನಗಳನ್ನು ನಾವು ಕುಕ್ಕರ್‌ನಲ್ಲಿಯೇ ಮಾಡುತ್ತೇವೆ. ಪ್ರೆಶರ್‌ ಕುಕ್ಕರ್‌ ಇದ್ದರೆ ಸಮಯ ಮತ್ತು ಗ್ಯಾಸ್‌ ಎರಡನ್ನೂ ಉಳಿಸಬಹುದು.

ಆದರೆ ಹಲವು ಬಾರಿ ಕುಕ್ಕರ್‌ಗಳಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ, ಬೇಳೆ ಬೇಯಿಸುವಾಗ ವಿಶಲ್‌ನಿಂದ ನೀರು ಸೋರುತ್ತದೆ. ಇದಕ್ಕೆ ಕಾರಣ ಕುಕ್ಕರ್‌ನ ನಿರ್ವಹಣೆಯ ಕೊರತೆ. ಕೆಲವೊಂದು ಸರಳ ಸಲಹೆಗಳನ್ನು ಅನುಸರಿಸಿದ್ರೆ ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು. ಕೆಲವೊಮ್ಮೆ ನಮ್ಮದೇ ತಪ್ಪಿನಿಂದಾಗಿ ಕುಕ್ಕರ್‌ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.

ಆಹಾರವನ್ನು ಬೇಯಿಸುವಾಗ, ಕುಕ್ಕರ್‌ನ ಮುಚ್ಚಳದಿಂದ ಉಗಿ ಸೋರುವುದು ಅನೇಕ ಬಾರಿ ಕಂಡುಬರುತ್ತದೆ. ಕುಕ್ಕರ್‌ನ ಮುಚ್ಚಳವು ವಕ್ರವಾಗಿದ್ದರೆ, ಸರಿಯಾಗಿ ಕೂರದೇ ಇದ್ದರೆ ಈ ರೀತಿ ಆಗಬಹುದು. ಈ ಸಂದರ್ಭದಲ್ಲಿ ಅದನ್ನು ನೀವೇ ಸರಿಪಡಿಸುವುದು ಸರಿಯಲ್ಲ. ಏಕೆಂದರೆ ನೀವು ಪರಿಣಿತರಲ್ಲ. ಮಾರುಕಟ್ಟೆಯಲ್ಲಿರುವ ಮೆಕ್ಯಾನಿಕ್ ಮೂಲಕ ಅದನ್ನು ಸರಿಪಡಿಸಿ. ಕುಕ್ಕರ್‌ನಲ್ಲಿ ಕೆಲವೊಮ್ಮೆ ಪ್ರೆಶರ್‌ ಸರಿಯಾಗಿ ಬರುವುದೇ ಇಲ್ಲ.

ಹಾಗಾದಾಗ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ರಬ್ಬರ್ ಅನ್ನು ಹೊರತೆಗೆದು  ಪರಿಶೀಲಿಸುವುದು. ರಬ್ಬರ್‌ಗೆ ಹಾನಿಯಾಗಿದೆಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ. ರಬ್ಬರ್‌ ಸ್ವಲ್ಪ ತುಂಡಾಗಿದ್ದರೂ ಪ್ರೆಶರ್‌ ಬರುವುದಿಲ್ಲ. ಕುಕ್ಕರ್‌ನ ರಬ್ಬರ್ ಅನ್ನು ಪ್ರತಿ 2 ರಿಂದ 4 ತಿಂಗಳಿಗೊಮ್ಮೆ ಬದಲಾಯಿಸಬೇಕು. ಕುಕ್ಕರ್‌ನಲ್ಲಿ ಆಹಾರವನ್ನು ಬೇಯಿಸುವಾಗ ಅದು ತಳದಲ್ಲಿ ಅಂಟಿಕೊಂಡರೆ ಒತ್ತಡವು ಹೆಚ್ಚಾಗುವ ಸಾಧ್ಯತೆಯಿದೆ. ಒತ್ತಡ ಅತಿಯಾದರೆ ಕುಕ್ಕರ್‌ ಸ್ಫೋಟವಾಗಬಹುದು. ಹಾಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸಿ. ಸ್ವಲ್ಪ ಸಮಸ್ಯೆ ಕಂಡು ಬಂದರೂ ಕೂಡಲೇ ಅದನ್ನು ಸರಿಪಡಿಸಿಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...