ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ನ ಅಗ್ರ ತಂಡಗಳಲ್ಲಿ ಒಂದಾಗಿದೆ. ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ದಿಗ್ಗಜ ಆಟಗಾರರು ಈ ತಂಡದ ಪರ ಆಡಿದ್ದಾರೆ. ಆದರೆ ವಿಚಿತ್ರ ಏನಂದ್ರೆ, ಆರ್ಸಿಬಿ ಒಮ್ಮೆಯೂ ಐಪಿಎಲ್ ಚಾಂಪಿಯನ್ ಆಗಿಲ್ಲ. ಹಾಗಂತ ಆರ್ಸಿಬಿ ಅಭಿಮಾನಿಗಳು ನಿರಾಸೆಯಾಗಿಲ್ಲ. ತಮ್ಮ ತಂಡ ಕಪ್ ಗೆದ್ದೇ ಗೆಲ್ಲುತ್ತೆ ಅನ್ನೋ ನಿರೀಕ್ಷೆ ಇಂದಿಗೂ ಇಡ್ಕೊಂಥಡಿದ್ದಾರೆ.
ಇಡೀ ವಿಶ್ವವೇ ಆರ್ಸಿಬಿ ಅಭಿಮಾನಿಗಳ ಬಗ್ಗೆ ಮಾತನಾಡುತ್ತೆ. ಅಭಿಮಾನಿಗಳು ಇದ್ದರೆ ಹಾಗಿರಬೇಕು ಅಂತ ಹೇಳಿಕೊಳ್ಳುತ್ತೆ. ಗೆದ್ದರೆ ತಂಡದಷ್ಟೆ ಹರುಷ ಪಡುವ, ಸೋತರೆ ತಂಡಕ್ಕಿಂತಲೂ ಹೆಚ್ಚು ದುಃಖ ಪಡುವ ಅಭಿಮಾನಿಗಳೂ ಆರ್ಸಿಬಿಗೆ ಇದ್ದಾರೆ. ಇತ್ತಿಚೆಗೆ ಇದೇ ಆರ್ಸಿಬಿ ತಂಡದ ಅಭಿಮಾನಿಯೊಬ್ಬ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಲಾಗಿದ್ದ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
2023ರ ಐಪಿಎಲ್ನಲ್ಲಿ ನಡೆದ RCB ಮತ್ತು LSG ತಂಡದ ಇಂಟ್ರಸ್ಟಿಂಗ್ ಮ್ಯಾಚ್ ಯಾರು ತಾನೇ ಮರೆಯೋದಕ್ಕೆ ಸಾಧ್ಯ ಹೇಳಿ.
ರೋಮಾಂಚನಕಾರಿಯಾದ ಈ ಮ್ಯಾಚ್ ನಲ್ಲಿ ಕೊನೆಯಲ್ಲಿ RCB ಸೋತಿತ್ತು. ಆಗ ಓರ್ವ ಬಾಲಕ ಬಾಟಲ್ನ್ನ ಎತ್ತಿಕೊಂಡು ಕುಡಿಯುತ್ತಿರುತ್ತಾನೆ. ಅದು ಕೋಲ್ಡ್ ಡ್ರಿಂಕ್(ಪೆಪ್ಸಿ) ಅಷ್ಟೆ. ಹಾಗೆ ಪೆಪ್ಸಿ ಕುಡಿಯುವ ಫೋಟೋವನ್ನ ಆತನ ಸಹೋದರಿ ತನ್ನ ಟ್ವಿಟರ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದಾಳೆ. ಅದು RCB ಸೋತ ನೋವಲ್ಲಿ ಕುಡಿಯುವಂತೆ ಕಾಣಿಸುತ್ತೆ.
ಅದಕ್ಕೆ ಆಕೆ ಈ ಫೋಟೋ ಶೀರ್ಷಿಕೆಯಲ್ಲಿ “ಎದ್ದೇಳು ಮಗು, ದುಃಖಿಸಲು ಜೀವನ ತುಂಬಾ ಚಿಕ್ಕದಾಗಿದೆ” ಎಂದು ತಮಾಷೆ ಮಾಡಿದ್ದಾಳೆ. ಅಷ್ಟೆ ಅಲ್ಲ ತಮ್ಮ ಸಹೋದರ ಡ್ರಾಮೇಬಾಜ್ (ನಾಟಕದ ರಾಜ) ಅಂತ ಕೂಡ ಬರೆದು, ಆತನ ಕಾಲನ್ನ ಎಳೆದಿದ್ದಾಳೆ.
ಪೆಪ್ಸಿ ಕಂಪನಿ ಈ ತಮಾಷೆಯ ಪೋಸ್ಟ್ ನೋಡಿ ಅದಕ್ಕೆ ಪ್ರತ್ಯುತ್ತರವಾಗಿ ‘ಧನ್ಯವಾದ ತಿಳಿಸಿದೆ. ಪೆಪ್ಸಿ ಕುಡಿಯುವ ಹುಡುಗ ವೈರಲ್ ಆಗಿದ್ದು, ಆತನೇ ಕಂಪನಿಯ ಅಂಬಾಸಿಡರ್ ಆಗಿದಂತಿದೆ. ಕಂಪನಿ ಈ ಫೋಟೋ ನೋಡಿ ಪೆಪ್ಸಿ ಕೇವಲ ಕಾರ್ಬೊನೇಟೆಡ್ ಪಾನೀಯ ಎಂದು ಕೂಡ ಸ್ಪಷ್ಟ ಪಡಿಸಿದೆ.
ನೆಟ್ಟಿಗರು, ಸಹೋದರ-ಸಹೋದರಿಯ ಈ ಪೋಸ್ಟನ್ನ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಅಷ್ಟೆ ಅಲ್ಲ ಈ ಪೋಸ್ಟ್ಗೆ ಹೊಂದುವಂತಹ ಅನೇಕ ಫೋಟೋಗಳನ್ನ ಪೋಸ್ಟ್ ಮಾಡುತ್ತಿದ್ದಾರೆ. ಅವುಗಳು ಸಹ ವೈರಲ್ ಆಗುತ್ತಿವೆ.
https://twitter.com/PepsiIndia/status/1647210632792657920?ref_src=twsrc%5Etfw%7Ctwcamp%5Etweetembed%7Ctwterm%5E1647210632792657920%7Ctwgr%5Ef843f82fd58a7a19c8429a9274cc5885d03171cb%7Ctwcon%5Es1_&ref_url=https%3A%2F%2Fwww.freepressjournal.in%2Fviral%2Frcb-fan-shares-photo-of-dramebaaz-brother-pepsi-reacts-on-twitter