ದಿಲ್‌ಜೀತ್ ದೋಸಾಂಜ್ ಪಂಜಾಬಿ ಖ್ಯಾತ ಗಾಯಕರಲ್ಲಿ ಒಬ್ಬರು. ಈಗ ಇವರು ಹೊಸ ಇತಿಹಾಸವೊಂದನ್ನ ರಚಿಸಿ ಸುದ್ದಿಯಲ್ಲಿದ್ದಾರೆ. ಕೊಚೆಲಾ ವೆಲಿಯಲ್ಲಿ ಮೂಜಿಕ್ ಎಂಡ್ ಆರ್ಟ್ ಫೆಸ್ಟಿವಲ್ 2023 ನಡೆದಿದ್ದು, ಅದರಲ್ಲಿ ಭಾಗವಹಿಸಿ ಹಾಡಿದ ಮೊದಲ ಭಾರತೀಯ ಪಂಜಾಬಿ ಗಾಯಕ ಇವರಾಗಿದ್ದಾರೆ.
ಪ್ರತಿ ವರ್ಷ ಕ್ಯಾಲಿಫೋರ್ನಿಯಾದಲ್ಲಿ ನಡೆಯುವ ಕೊಚೆಲಾ ವೆಲಿ ವಿಶ್ವದ ಅತ್ಯಂತ ಜನಪ್ರಿಯ ಸಂಗೀತ ಕಾರ್ಯಕ್ರಮಗಳಲ್ಲೊಂದಾಗಿದೆ. ಕಳೆದ 2 ವಾರಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ವಿಶ್ವದ ಅನೇಕ ಗಾಯಕರು ವೇದಿಕೆ ಮೇಲೆ ಹಾಡಿ ಅಭಿಮಾನಿಗಳನ್ನ ರಂಜಿಸಿದ್ದಾರೆ. ಈ ಬಾರಿ ಬ್ಲಾಕ್‌ಬಾಸ್ಟರ್ ದಕ್ಷಿಣ ಏಷಿಯಾ ಗಾಯಕರಿಗೂ ಇಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುವ ಅವಕಾಶ ನೀಡಲಾಗಿತ್ತು. ಅದರಲ್ಲಿ ಬಿಲ್‌ಜೀತ್ ದೋಸಾಂಜ್ ಕೂಡಾ ಒಬ್ಬರಾಗಿದ್ದರು. ಇನ್ನೂ ಇದೇ ವೇದಿಯಲ್ಲಿ ಪಾಕಿಸ್ತಾನ್ ಗಾಯಕ ‘ಪಸೂರಿ’ ಹಾಡಿನ ಮೂಲಕ ಫೇಮಸ್ ಆಗಿದ್ದ ಅಲಿ ಸೇರಿ ಕೂಡಾ ತಮ್ಮ ಕಂಠಸಿರಿಯಿಂದ ಪ್ರೇಕ್ಷಕರ ಗಮನ ಸೆಳೆದರು.
ನಟ ಹಾಗೂ ಗಾಯಕ ದಿಲ್‌ಜೀತ್ ಸಿಂಗ್ ತಲೆಗೆ ಪಗಡಿ ಸುತ್ತಿಕೊಂಡು, ಕಪ್ಪು ಬಣ್ಣದ ಕನ್ನಡಕ, ಕುರ್ತಾ, ಪೈಜಾಮಾ ಹಾಕಿಕೊಂಡು, ಪಕ್ಕಾ ಪಂಜಾಬಿ ಹೈದನಂತೆ ವೇದಿಕೆಯಲ್ಲಿ ಹಾಡನ್ನ ಹೇಳಿ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಂಡರು. ದಿಲ್‌ಜೀತ್ ಸಿಂಗ್ ತಮ್ಮ ಪ್ರದರ್ಶನದ ವಿಡಿಯೋ ಒಂದನ್ನ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈಗಾಗಲೇ ಈ ವಿಡಿಯೋಗೆ ಲಕ್ಷಾಂತರ ಲೈಕ್ ಹಾಗೂ ಕಾಮೆಂಟ್‌ಗಳು ಬಂದಿವೆ.
TODE BLACKPINK, Kid Laroi, 250 XCX, Labrinth, Jai Wolf, Joy Crookes, Jai Paul, Frank Ocean ಹಾಗೂ Underworld ಸೇರಿದಂತೆ ಅನೇಕ ಖ್ಯಾತ ಗಾಯಕರು ಹಾಡಿದ್ದು ಈ ಕಾರ್ಯಕ್ರಮದ ಮೆರುಗನ್ನ ಇನ್ನಷ್ಟು ಹೆಚ್ಚಿಸಿತ್ತು.
https://www.youtube.com/watch?v=5iLnaipLMw4&t=5s