ವಿಜ್ಞಾನದ ಕುರಿತು ಮಾನವನ ಒಂದೊಂದು ಕುತೂಹಲ ತಣಿಯುತ್ತಾ ಸಾಗಿದಂತೆ ತಂತ್ರಜ್ಞಾನದಲ್ಲಿ ಸುಧಾರಣೆಗಳು ಆಗುತ್ತಲೇ ಇರುತ್ತವೆ. ಈ ತಾಂತ್ರಿಕ ಸುಧಾರಣೆಗೆ ಕೊನೆ ಮೊದಲೆಂಬುದೇ ಇಲ್ಲ.
ಇಂಜಿನಿಯರ್ ಸೆರ್ಗಿ ಗಾರ್ಡೆವ್ ವಿನೂತನವಾದ ಬೈಸಿಕಲ್ ಒಂದನ್ನು ವಿನ್ಯಾಸಗೊಳಿಸಿದ್ದಾರೆ.
ಸಾಮಾನ್ಯವಾಗಿ ಬೈಸಿಕಲ್‌ಗಳಿಗೆ ವೃತ್ತಾಕಾರದ ಚಕ್ರಗಳಿದ್ದರೆ, ಈ ಬೈಸಿಕಲ್‌ಗೆ ಚೌಕಾಕಾರದ ಚಕ್ರಗಳಿವೆ.
ಯೂಟ್ಯೂಬ್‌ನಲ್ಲಿ ಟೆಕ್ ಸವ್ವಿ ಚಾನೆಲ್ ಒಂದನ್ನು, ಕ್ಯೂ, ಹೊಂದಿರುವ ಸೆರ್ಗಿ ತಮ್ಮ ಲೇಟೆಸ್ಟ್ ಬೈಸಿಕಲ್ ವಿನ್ಯಾಸದಿಂದ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಅಕ್ಷರಶಃ ದಂಗು ಬಡಿಸಿದ್ದಾರೆ.
ಅಂದಹಾಗೆ ಈ ಚೌಕಾಕೃತಿಯ ಚಕ್ರಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದು, ನೋಡುಗರನ್ನು ದಂಗು ಬಡಿಸಿವೆ. ಇದರ ಕಾರ್ಯವನ್ನೊಮ್ಮೆ ನೀವೂ ನೋಡಿ ಆನಂದಿಸಿ.