ಕೃತಕ ಬುದ್ಧಿಮತ್ತೆ (ಎಐ) ಮೂಲಕ ಚಿತ್ರಗಳನ್ನು ಬಿಡಿಸುವ ತಂತ್ರಜ್ಞಾನದ ದುರ್ಬಳಕೆಗಳ ವ್ಯಾಪಕ ದೂರುಗಳ ಹಿನ್ನೆಲೆಯಲ್ಲೇ, ರೆಡ್ಡಿಟ್‌ನಲ್ಲಿ ತನ್ನ ನಗ್ನ ಚಿತ್ರಗಳನ್ನು ಮಾರಿಕೊಳ್ಳುತ್ತಿರುವ 19ರ ಬಾಲೆಯೊಬ್ಬಳು ಇದೇ ಎಐನ ಸೃಷ್ಟಿ ಎಂದು ತಿಳಿದು ಬಂದಿದೆ.
ಕ್ಲೌಡಿಯಾ ಹೆಸರಿನ ಈ ಕೃತಕ ಬುದ್ಧಿಯ ಸೃಷ್ಟಿಯ ಬಾಲೆ, ಸಾಮಾಜಿಕ ಜಾಲತಾಣ ರೆಡ್ಡಿಟ್‌ನ ಖಾತೆಯೊಂದರ ಮೂಲಕ ತನ್ನ ನಗ್ನ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ನೆಟ್ಟಿಗರಲ್ಲಿ ಭಾರೀ ಪ್ರತಿಕ್ರಿಯೆಗಳಿಗೆ ಕಾರಣಳಾಗಿದ್ದಾಳೆ.
ಮಹಿಳೆಯೊಬ್ಬರ ಫೋಟೋಗಳನ್ನು ಬಳಸಿಕೊಂಡು $500 ಸಂಪಾದಿಸಿದ ವ್ಯಕ್ತಿಯೊಬ್ಬನನ್ನು ಕಂಡ ಕಂಪ್ಯೂಟರ್ ಶಿಕ್ಷಣದ ವಿದ್ಯಾರ್ಥಿಗಳಿಬ್ಬರು ತಮಾಷೆಗೆಂದು ಮೊದಲಿಗೆ ಈ ಕೆಲಸಕ್ಕೆ ಮುಂದಾಗಿದ್ದಾರೆ. ಮೊದಲಿಗೆ ಈ ಎಐ ಸೃಷ್ಟಿತ ಫೋಟೋಗಳನ್ನು ಮಾರುವ ಮೂಲಕ $100 ಸಂಪಾದಿಸಿದ್ದಾರೆ ಈ ವಿದ್ಯಾರ್ಥಿಗಳು.
ಎಐ ಸೃಷ್ಟಿತ ಪೋರ್ನ್ ಉದ್ಯಮವೂ ದಿನೇ ದಿನೇ ಚಿಗುರೊಡೆಯುತ್ತಿದ್ದು, ಈ ವಿಚಾರವಾಗಿ ಪರ-ವಿರೋಧದ ಚರ್ಚೆಗಳು ಎಲ್ಲೆಡೆ ವ್ಯಕ್ತವಾಗುತ್ತಿವೆ. ಅನ್‌ಸ್ಟೇಬಲ್ ಡಿಫ್ಯೂಶನ್ ಹೆಸರಿನ ಸಮೂಹವೊಂದು ಎಐ ಸೃಷ್ಟಿತ ಪೋರ್ನ್ ಅನ್ನು ಅಧಿಕೃತಗೊಳಿಸಲು ಪಣ ತೊಟ್ಟು ನಿಂತಿದೆ. ಸಾಮೂಹಿಕ ನಿಧಿ ಸಂಗ್ರಹಣೆ ಪೋರ್ಟಲ್ ಒಂದರ ಮೂಲಕ ಈ ಸಮೂಹವು ತನ್ನ ಉದ್ದೇಶಕ್ಕಾಗಿ $60,000 ಗಳನ್ನು ಸಂಗ್ರಹಿಸಿದೆ.
ಛಾಯಾಗ್ರಾಹಕರು ಹಾಗೂ ಕಲಾವಿದರು ಎಐ ಸೃಷ್ಟಿತವಾದ ಈ ರೀತಿಯ ರಚನೆಗಳ ವಿರುದ್ಧ ದನಿಯೆತ್ತಿದ್ದು, ಆನ್ಲೈನ್ ಕಾನೂನು ಪಾಲನಾ ಸಂಸ್ಥೆಗಳಿಗೆ ಹೊಸ ತಲೆ ನೋವು ಸೃಷ್ಟಿಯಾಗಿದೆ.