
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರ ಮನವೊಲಿಕೆ ಯತ್ನ ಮಾಡಲಾಯಿತು. ಆದರೂ ಸಾಧ್ಯವಾಗಿಲ್ಲ. ಅವರು ರಾಜೀನಾಮೆ ನಿರ್ಧಾರ ಮಾಡಿದ್ದು ತಪ್ಪು. ಅವರಿಗೆ ದೊಡ್ಡ ಹುದ್ದೆ ಕೊಡುವುದಾಗಿ ಹೇಳಲಾಯಿತು. ದೆಹಲಿ ಮಟ್ಟದಲ್ಲಿ ಹುದ್ದೆ ನೀಡುವ ಭರವಸೆಯನ್ನೂ ಕೊಟ್ಟು ಮನವೊಲಿಸುವ ಪ್ರಯತ್ನವನ್ನೂ ಮಾಡಲಾಯಿತು. ಆದರೂ ಪಕ್ಷ ತೊರೆಯುವ ತೀರ್ಮಾನ ಮಾಡಿದ್ದಾರೆ. ಶೆಟ್ಟರ್ ನಡೆ ನೋವು ತಂದಿದೆ ಎಂದರು.
ಉತ್ತರ ಕರ್ನಾಟಕ ಭಾಗಕ್ಕೆ ಬಿಜೆಪಿ ಸರ್ಕಾರ ಮಹತ್ವ ಕೊಟ್ಟಿದೆ. ಲಿಂಗಾಯಿತ ಸಮುದಾಯವನ್ನೂ ಯಾವತ್ತೂ ಕಡೆಗಣಿಸಿಲ್ಲ ಎಂದು ಹೇಳಿದರು.

