ಈ 15 ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಬಾಕಿ ಇರಿಸಿಕೊಂಡ ಕಾಂಗ್ರೆಸ್; ನಾಲ್ವರು ಹಾಲಿ ಶಾಸಕರಿಗೆ ಇನ್ನೂ ಖಾತ್ರಿ ಆಗದ ಟಿಕೆಟ್

ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಶನಿವಾರದಂದು ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಈ ಮೂಲಕ 224 ಕ್ಷೇತ್ರಗಳ ಪೈಕಿ 209 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದಂತಾಗಿದೆ. ನಾಲ್ವರು ಹಾಲಿ ಶಾಸಕರು ಪ್ರತಿನಿಧಿಸುತ್ತಿರುವ ಕ್ಷೇತ್ರ ಸೇರಿದಂತೆ ಒಟ್ಟು 15 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಆಗಬೇಕಿದೆ.

ರಾಯಚೂರು, ಚಿಕ್ಕಮಗಳೂರು, ಲಿಂಗಸಗೂರು, ಕೆಆರ್ ಪುರ, ಹುಬ್ಬಳ್ಳಿ – ಧಾರವಾಡ ಕೇಂದ್ರ, ಪುಲಕೇಶಿ ನಗರ, ಹುಬ್ಬಳ್ಳಿ – ಧಾರವಾಡ ಪಶ್ಚಿಮ, ಸಿ ವಿ ರಾಮನ್ ನಗರ, ಶಿಗ್ಗಾಂವಿ, ಶ್ರವಣಬೆಳಗೊಳ, ಹರಿಹರ, ಅರಕಲಗೂಡು, ಶಿಡ್ಲಘಟ್ಟ, ಮಂಗಳೂರು ನಗರ (ಉತ್ತರ) ಹಾಗೂ ಮುಳಬಾಗಿಲು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಆಗಬೇಕಿದೆ

ಈ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಹಾಲಿ ಕಾಂಗ್ರೆಸ್ ಶಾಸಕರಿದ್ದು, ಹರಿಹರ ಕ್ಷೇತ್ರದ ಶಾಸಕ ರಾಮಪ್ಪ, ಶಿಡ್ಲಘಟ್ಟ ಕ್ಷೇತ್ರದ ಮುನಿಯಪ್ಪ, ಪುಲಕೇಶಿ ನಗರದ ಅಖಂಡ ಶ್ರೀನಿವಾಸ್ ಹಾಗೂ ಲಿಂಗಸಗೂರು ಕ್ಷೇತ್ರದ ಶಾಸಕ ಡಿ.ಎಸ್. ಹೂಲಗೇರಿ ಅವರಿಗೆ ಟಿಕೆಟ್ ಸಿಗುತ್ತದೋ ಇಲ್ಲವೋ ಎಂಬ ಅನುಮಾನ ಮೂಡಿದೆ.

ಮಹತ್ವದ ಸಂಗತಿ ಎಂದರೆ ಜಗದೀಶ್ ಶೆಟ್ಟರ್ ಪ್ರತಿನಿಧಿಸುತ್ತಿರುವ ಹುಬ್ಬಳ್ಳಿ – ಧಾರವಾಡ ಕೇಂದ್ರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಣಕ್ಕಿಳಿದಿರುವ ಶಿಗ್ಗಾಂವಿ ಕ್ಷೇತ್ರಗಳಿಗೆ ಕಾಂಗ್ರೆಸ್ ಇನ್ನೂ ತನ್ನ ಅಭ್ಯರ್ಥಿ ಘೋಷಣೆ ಮಾಡಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read