ಬಿಎಸ್6 ಫೇಸ್ 2 ಮಾನದಂಡಗಳಿಗೆ ಅನುಗುಣವಾಗಿ ತನ್ನೆಲ್ಲಾ ಪಿಕ್-ಅಪ್ ವಾಹನಗಳನ್ನು ಮಾರ್ಪಾಡು ಮಾಡಿದ ಇಸುಜ಼ು ಮೋಟರ್ಸ್ ಇಂಡಿಯಾ. ಇದೇ ವೇಳೆ ತನ್ನ ವಾಹನಗಳಿಗೆ ಕೆಲವೊಂದು ಬಾಹ್ಯ ಮಾರ್ಪಾಡುಗಳನ್ನೂ ಮಾಡಿದೆ ಇಸುಜ಼ು.
ಇಸುಜ಼ು ಡಿ-ಮ್ಯಾಕ್ಸ್ ವಿ ಕ್ರಾಸ್, ಹೈ-ಲ್ಯಾಂಡರ್ ಹಾಗೂ ಮ್ಯೂ-ಎಕ್ಸ್‌ಗಳು 1.9ಲೀ ಟರ್ಬೋ ಡೀಸೆಲ್ ಮೋಟರ್ ಬಳಸುತ್ತಿದ್ದು, 163 ಬಿಎಚ್‌ಪಿ ಹಾಗೂ 360ಎನ್‌ಏಂ ಟಾರ್ಕ್ ಉತ್ಪಾದಿಸಬಲ್ಲ ಶಕ್ತಿ ಹೊಂದಿವೆ. ಆರ್‌ಡಿಇ ಮಾನದಂಡಗಳನ್ನು ಪೂರೈಸಲು ಈ ಮೂರೂ ವಾಹನಗಳಿಗೆ ಸ್ಟಾರ್ಟ್-ಸ್ಟಾಪ್ ವ್ಯವಸ್ಥೆ, ಕಡಿಮೆ ಘರ್ಷಣೆಯ ಚಕ್ರಗಳು ಹಾಗೂ ಟ್ಯಾನ್ಸ್‌ಮಿಶನ್ ಫ್ಲುಯಿಡ್ ವಾರ್ಮರ್ (ಆಟೋಮ್ಯಾಟಿಕ್) ಒದಗಿಸಲಾಗಿದೆ.
ಇಸುಜ಼ು ಡಿ-ಮ್ಯಾಕ್ಸ್ ವಿ-ಕ್ರಾಸ್ 2WD ಹಾಗೂ 4WD ಅವತರಣಿಕೆಗಳಲ್ಲಿ ಲಭ್ಯವಿದ್ದು, ಎರಡರಲ್ಲೂ 6-ಸ್ಪೀಡ್ ಆಟೋಮ್ಯಾಟಿಕ್ ಅಥವಾ ಮ್ಯಾನುವಲ್ ಟ್ರಾನ್ಸ್‌ಮಿಶನ್ ಲಭ್ಯವಿದೆ. ಹೈಲ್ಯಾಂಡರ್‌ಗೆ 6-ಸ್ಪೀಡ್ ಮ್ಯಾನುವಲ್ ಹಾಗೂ 2WD ಕಾನುಫಿಗರೇಷನ್ ಇದ್ದು, ಮ್ಯೂ-ಎಕ್ಸ್ ಎಸ್‌ಯುವಿಯನ್ನು 4WD ವ್ಯವಸ್ಥೆಯೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್‌ನಲ್ಲಿ ಬಿಡುಗಡೆ ಮಾಡಲಾಗಿದೆ.
ಹೊಸ ವೇಲೆನ್ಸಿಯಾ ಆರೆಂಜ್ ಬಾಹ್ಯ ವರ್ಣಗಳ ಅನುಸಾರ ಇದೀಗ ಮೂರು ಮಾಡೆಲ್‌ಗಳಲ್ಲಿ ಲಭ್ಯವಿದೆ. ಮ್ಯೂ-ಎಕ್ಸ್‌ಗೆ ಹೊಸ ಕ್ರೋಂ ಗ್ರಿಲ್ ಸೇರ್ಪಡೆಯಾಗಿದೆ. ಡಿ-ಮ್ಯಾಕ್ಸ್ ವಿ ಕ್ರಾಸ್ 4×2ಗೆ ಕಪ್ಪು ಅಲಾಯ್ ಚಕ್ರಗಳು, ಕಂದು ಓಆರ್‌ವಿಎಂಗಳು ಹಾಗೂ ಫಾಗ್ ಲ್ಯಾಂಪ್‌ಗಳನ್ನು ಕೊಡಲಾಗಿದೆ. ಮಿಕ್ಕಂತೆ ಒಳಾಂಗಣದಲ್ಲೂ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದೆ.
ಡಿ ಮ್ಯಾಕ್ಸ್ ವಿ ಕ್ರಾಸ್ 4X2ನಲ್ಲಿ ಕ್ರೂಸ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಥಿರತೆ, ಹಿಲ್-ಡಿಸೆಂಟ್ ಕಂಟ್ರೋಲ್ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್‌ಗಳ ಫೀಚರ್ ಅಳವಡಿಸಲಾಗಿದೆ. ಹೈಲ್ಯಾಂಡರ್‌ಗೆ ಸ್ವಯಂ ಚಾಲಿತ ಕ್ಲೈಮೇಟ್ ಕಂಟ್ರೋಲ್ ಹಾಗೂ ಹಿಂಬದಿ ಡೀಫಾಗರ್ ನೀಡಲಾಗಿದೆ.