IPL ವೇಳೆ ಗಮನ ಸೆಳೆದ ಬಾಲಿವುಡ್ ನಟಿ ಊರ್ವಶಿ ರೌಟೇಲಾ; ಕೋಯಿ ಮಿಲ್ ಗಯಾ ಅಂದ್ರು ಫ್ಯಾನ್ಸ್…!

ಇಡೀ ದೇಶದಲ್ಲಿ ಐಪಿಎಲ್ ಜ್ವರ ಹಬ್ಬಿದೆ. ಸಾಮಾನ್ಯರು ಮಾತ್ರವಲ್ಲದೆ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಐಪಿಎಲ್ ಅನ್ನು ಆನಂದಿಸುತ್ತಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ದೆಹಲಿ ಕ್ಯಾಪಿಟಲ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ನಟಿ ಊರ್ವಶಿ ರೌಟೇಲಾ ಅವರು ಹಾಜರಿದ್ದರು. ಸ್ಟೇಡಿಯಂನಲ್ಲಿ ನೆರೆದಿದ್ದ ಜನರ ಗಮನ ಊರ್ವಶಿಯತ್ತ ನೆಟ್ಟಿತ್ತು.

ಹೌದು, ನಟಿ ಸ್ಟ್ಯಾಂಡ್‌ನಿಂದ ಕ್ರಿಕೆಟ್ ಪಂದ್ಯವನ್ನು ಆನಂದಿಸುತ್ತಿರುವ ವಿಡಿಯೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 1998 ರ ಚಲನಚಿತ್ರ ಕುಚ್ ಕುಚ್ ಹೋತಾ ಹೈ ನ ಕೋಯಿ ಮಿಲ್ ಗಯಾ ಹಾಡಿಗೆ ದನಿಗೂಡಿಸಿದ್ರು. ಈ ವೇಳೆ ಸ್ಟ್ಯಾಂಡ್‌ನಲ್ಲಿ ಊರ್ವಶಿಯನ್ನು ನೋಡಿದ ಅಭಿಮಾನಿಗಳು ರಿಷಬ್ ಪಂತ್ ಹೆಸರನ್ನು ಜಪಿಸಲು ಪ್ರಾರಂಭಿಸಿದರು. ಆದರೆ, ಅದರತ್ತ ಊರ್ವಶಿ ಗಮನಕೊಟ್ಟಂತೆ ಕಾಣಲಿಲ್ಲ. ಬದಲಿಗೆ ಎಲ್ಲರಿಗೂ ಹಾಯ್ ಎನ್ನುತ್ತಾ ಕೈ ಬೀಸಿದ್ದಾರೆ.

ಅಂದಹಾಗೆ, ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ನ ನಾಯಕರಾಗಿದ್ದರು. ಆದರೆ, ಇತ್ತೀಚೆಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಅವರು ಗಾಯಗೊಂಡಿರುವುದರಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ, ಡೇವಿಡ್ ವಾರ್ನರ್ ಅವರನ್ನು ಸ್ಥಾನಕ್ಕೆ ಬದಲಾಯಿಸಲಾಗಿದೆ.

ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳುವಾಗ ಊರ್ವಶಿ, ದೆಹಲಿಯಲ್ಲಿರುವ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ದೆಹಲಿಯ ಎಲ್ಲಾ ಆತ್ಮೀಯ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದಗಳು. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ, ಸ್ಟ್ಯಾಂಡ್‌ನಲ್ಲಿ ನಿಂತು ಎಲ್ಲಾ ಅಭಿಮಾನಿಗಳತ್ತ ಕೈ ಬೀಸುತ್ತಿರುವುದನ್ನು ಕಾಣಬಹುದು. ಅಲ್ಲದೆ ಅಭಿಮಾನಿಗಳನ್ನು ನಟಿ ಹುರಿದುಂಬಿಸಿದ್ದಾರೆ,

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read