ʼಎನಿಮಿʼ ಚಿತ್ರದ ತಮಿಳಿನ ತುಮ್ ತುಮ್ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕ ಜನರು ಹಾಡನ್ನು ಹಾಡುವ ಮತ್ತು ಅದಕ್ಕೆ ನೃತ್ಯ ಮಾಡುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಇದೀಗ ಈ ಹಾಡಿಗೆ ಹೃತಿಕ್ ರೋಷನ್ ‘ಡ್ಯಾನ್ಸ್’ ಮಾಡಿರುವ ಮತ್ತೊಂದು ವಿಡಿಯೋ ಹಲವು ಮಂದಿಯ ಗಮನ ಸೆಳೆದಿದೆ.
ಇನ್‌ಸ್ಟಾಗ್ರಾಮ್ ಬಳಕೆದಾರ ಆಶಿಶ್ ಕಾಮತ್ ಅವರು ಹಂಚಿಕೊಂಡ ವಿಡಿಯೋದಲ್ಲಿ ಹೃತಿಕ್ ರೋಷನ್ ತುಮ್ ತುಮ್ ಗೆ ‘ಡ್ಯಾನ್ಸ್’ ಮಾಡುತ್ತಿರುವುದನ್ನು ನೋಡಬಹುದು. ಅಸಲಿಗೆ ಇದು ಕಹೋ ನಾ……. ಪ್ಯಾರ್ ಹೈ ಚಿತ್ರದ ಏಕ್ ಪಾಲ್ ಕಾ ಜೀನಾ ಹಾಡಿನ ನೃತ್ಯ ಸಂಯೋಜನೆಯಾಗಿದೆ.
ಮ್ಯೂಸಿಕ್ ವಿಡಿಯೋದಲ್ಲಿ ತುಮ್ ತುಮ್ ಅನ್ನು ಎಡಿಟ್ ಮಾಡಲಾಗಿದೆ. ಇದರಿಂದ ಹೃತಿಕ್ ರೋಷನ್ ವೈರಲ್ ಆದ ತಮಿಳಿನ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವಂತೆ ತೋರುತ್ತಿದೆ.
ಈ ವೀಡಿಯೊವನ್ನು ಮಾರ್ಚ್ 26 ರಂದು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ನಂತರ, ಇದನ್ನು 8 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಹಲವರು ಕ್ಲಿಪ್‌ನಲ್ಲಿ ಕಾಮೆಂಟ್‌ಗಳನ್ನು ಹಂಚಿಕೊಂಡಿದ್ದಾರೆ.