ಗೋವಾ-ಮುಂಬಯಿ ವಿಮಾನ ರದ್ದು: ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದ ಪ್ರಯಾಣಿಕರು 14-04-2023 6:33AM IST / No Comments / Posted In: Latest News, India, Live News ಗೋವಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ವಿಮಾನವೊಂದರ ಸಿಬ್ಬಂದಿಯ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಗೋವಾದಿಂದ ಮುಂಬಯಿಗೆ ತೆರಳಬೇಕಿದ್ದ ಗೋಏರ್ ವಿಮಾನವೊಂದರ ಹಾರಾಟ ರದ್ದಾಗಿದೆ ಎಂದು ಸಿಬ್ಬಂದಿ ವರ್ಗ ಪ್ರಯಾಣಿಕರಿಗೆ ತಿಳಿಸುತ್ತಲೇ ಈ ಚಕಮಕಿ ಆರಂಭಗೊಂಡಿದೆ. ವಿಮಾನದ ಟೇಕಾಫ್‌ಗೆ ಹತ್ತು ನಿಮಿಷಗಳ ಮುಂಚೆ ಈ ನೋಟಿಫೀಕೇಶನ್ ಕೊಡಲಾಗಿದೆ. ಹೀಗೆ ದಿಢೀರನೇ ವಿಮಾನದ ಹಾರಾಟ ರದ್ದಾದ ಕಾರಣದಿಂದ ಮುಂಬಯಿಗೆ ತೆರಳಲು ಪರ್ಯಾಯ ವ್ಯವಸ್ಥೆಗಳನ್ನು ತಕ್ಷಣ ಮಾಡಿಕೊಳ್ಳಲು ಸಾಧ್ಯವಾಗದೇ ಪ್ರಯಾಣಿಕರು ಸಿಟ್ಟಿಗೆದ್ದಿದ್ದಾರೆ. ತಮಗಾದ ಈ ಅನಾನುಕೂಲದಿಂದಾಗಿ ಪ್ರಯಾಣಿಕರು ಟ್ವಿಟರ್‌ನಲ್ಲಿ ತಮ್ಮ ಸಿಟ್ಟು ಕಾರಿಕೊಂಡಿದ್ದಾರೆ. 'Tod Do Sir Iska…': GoAir Passengers Create Ruckus At Goa Airport As Flight To Mumbai Cancelled#Goa #Mumbai #Flights #GoAir pic.twitter.com/SEJM7b4agz — @Rationalviews (@pramod_writes) April 12, 2023