ದೇಶದ ಅತ್ಯಂತ ಸಿರಿವಂತ ವ್ಯಕ್ತಿ ಮುಖೇಶ್ ಅಂಬಾನಿ ಮುಂಬೈನ ದಕ್ಷಿಣದಲ್ಲಿರುವ ತಮ್ಮ ಆಂಟಿಲಿಯಾ ನಿವಾಸದಲ್ಲಿ ಪತ್ನಿ ನೀತಾ ಹಾಗೂ ಪುತ್ರರಾದ ಆಕಾಶ್ ಹಾಗೂ ಅನಂತ್ ಅಂಬಾನಿರೊಂದಿಗೆ ವಾಸಿಸುತ್ತಾರೆ. ದೇಶದ ಅತಿ ದುಬಾರಿ ಮನೆ ಎಂಬ ಹೆಗ್ಗಳಿಕೆ ಇರುವ ಆಂಟಿಲಿಯಾ ದಕ್ಷಿಣ ಮುಂಬೈನ ಆಲ್ಟಾಮೌಂಟ್ ರಸ್ತೆಯಲ್ಲಿದೆ.
ಆಲ್ಟಾಮೌಂಟ್ ರಸ್ತೆಯು ಏಷ್ಯಾದ ಅತ್ಯಂತ ದುಬಾರಿ ಬೀದಿ ಎಂಬ ಹೆಗ್ಗಳಿಕೆ ಪಡೆದಿದ್ದು, ಕೇವಲ ’ಶತಕೋಟ್ಯಾಧೀಶರೇ’ ಇಲ್ಲಿ ಮನೆ ಮಾಡಿಕೊಂಡಿದ್ದಾರೆ.
ಮುಖೇಶ್‌ರ ನೆರೆಹೊರೆಯಲ್ಲಿರುವ ಓಸ್ವಾಲ್ ಕುಟುಂಬವು ’33 ಸೌತ್’ ಎಂಬ ವಸತಿ ಸಮುಚ್ಛಯದ 13ನೇ ಹಾಗೂ 17ನೇ ಡ್ಯೂಪ್ಲೆಕ್ಸ್ ಮನೆಗಳನ್ನು ಖರೀದಿಸಿದೆ. ಮೋತಿಲಾಲ್ ಓಸ್ವಾಲ್‌ರ ಒಟ್ಟಾರೆ ಆಸ್ತಿಯ ಮೌಲ್ಯವು 4242.11 ಕೋಟಿಯಷ್ಟಿದೆ.
ಟಾಟಾ ಸನ್ಸ್ ಸಮೂಹದ ಚೇರ್ಮನ್ ಎನ್. ಚಂದ್ರಶೇಖರನ್ ಸಹ ಮುಖೇಶ್ ಅಂಬಾನಿಯ ಅಕ್ಕಪಕ್ಕದ ಮನೆಯಲ್ಲಿದ್ದಾರೆ. ಕಳೆದ ಐದು ವರ್ಷಗಳಿಂದ ಚಂದ್ರಶೇಖರನ್ ಕುಟುಂಬ ಈ ಪ್ರದೇಶದಲ್ಲಿ ವಾಸಿಸುತ್ತಿದೆ.
ಇಲ್ಲಿನ ಟವರ್ ಒಂದರ 11ನೇ ಹಾಗೂ 12ನೇ ಮಹಡಿಯಲ್ಲಿ ಚಂದ್ರಶೇಖರನ್ ಡ್ಯುಪ್ಲೆಕ್ಸ್‌ಗಳನ್ನು 98 ಕೋಟಿ ರೂ. ಗಳಿಗೆ ಖರೀದಿ ಮಾಡಿದ್ದಾರೆ. ಭಾರತದಲ್ಲಿ ಅತ್ಯಂತ ಹೆಚ್ಚಿನ ಸಂಭಾವನೆ ಪಡೆಯುವ ಸಿಇಓ ಆಗಿರುವ ಚಂದ್ರಶೇಖರನ್ 2021-22 ರಲ್ಲಿ 109 ಕೋಟಿ ರೂ. ಗಳ ಪ್ಯಾಕೇಜ್ ಪಡೆಯುತ್ತಿದ್ದರು.
ಡ್ರೀಮ್ 11 ಸಂಸ್ಥೆಯ ಸಹ ಸ್ಥಾಪಕ ಹರೀಶ್ ಹಾಗೂ ರಚನಾ ಜೈನ್ 72 ಕೋಟಿ ರೂ. ಗಳಿಗೆ ಡ್ಯೂಪ್ಲೆಕ್ಸ್ ಒಂದನ್ನು ಇದೇ ಪ್ರದೇಶದಲ್ಲಿ ಖರೀದಿಸಿದ್ದಾರೆ. ಹರೀಶ್ ಜೈನ್‌ರ ಆಸ್ತಿಯ ಮೌಲ್ಯ 848 ಕೋಟಿ ರೂ. ಗಳಷ್ಟಿದೆ.
ಯಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಇದೇ ಬೀದಿಯೊಂದರ ವಸತಿ ಸಮುಚ್ಛಯವೊಂದನ್ನು 128 ಕೋಟಿ ರೂ. ಗಳಿಗೆ ಖರೀದಿ ಮಾಡಿದ್ದರು. ಖುರ್ಷಿದಾಬಾದ್ ಕಟ್ಟಡ ಎಂದು ಕರೆಯಲಾಗುವ ಈ ಸಮುಚ್ಛಯದಲ್ಲಿ ಆರು ಅಪಾರ್ಟ್‌ಮೆಂಟ್‌ಗಳಿದ್ದು, 150 ಕೋಟಿ ರೂ. ಬೆಲೆ ಬಾಳುತ್ತದೆ.