ಹೈದರಾಬಾದ್‌ನ ಶೇಕ್‌ಪೇಟ್ ವಿಭಾಗದ ಪ್ಯಾರಾಮೌಂಟ್ ಕಾಲೋನಿಯಲ್ಲಿ ಮೂವರು ಯುವಕರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರೋ ದುರಂತ ಘಟನೆ ನಡೆದಿದೆ.
ಮೂಲಗಳ ಪ್ರಕಾರ ಓರ್ವ ಯುವಕ ತನ್ನ ನಿವಾಸದಲ್ಲಿ ಕೆಟ್ಟುಹೋದ ನೀರಿನ ಮೋಟರ್ ಪಂಪ್ ಅನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದಾಗ ವಿದ್ಯುತ್ ಆಘಾತಕ್ಕೊಳಗಾಗಿದ್ದಾನೆ.
ಆತನನ್ನು ರಕ್ಷಿಸಲು ಇನ್ನಿಬ್ಬರು ಬಂದಾಗ, ಸುತ್ತಲೂ ನೀರು ಇದ್ದುದರಿಂದ ಅವರಿಗೂ ವಿದ್ಯುತ್ ಶಾಕ್ ತಗುಲಿದೆ. ಮೂವರನ್ನು ರಜಾಕ್ (15), ಅನಸ್ (18), ಮತ್ತು ರಿಜ್ವಾನ್ (18) ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಬಂಜಾರ ಹಿಲ್ಸ್ ಪೊಲೀಸರು ಆಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.