ನಿಸರ್ಗದಲ್ಲಿ ಪ್ರಾಣಿಗಳ ನಡೆ ಕೆಲವೊಮ್ಮೆ ಅಚ್ಚರಿ ಉಂಟುಮಾಡುವುದರ ಜೊತೆಗೆ ಕುತೂಹಲ ಮೂಡಿಸುತ್ತೆ. ಅಂತದ್ದೊಂದು ವಿಡಿಯೋ ಅಂತರ್ಜಾಲದಲ್ಲಿ ಹರಿದಾಡ್ತಿದ್ದು, ನೀರು ಕುಡಿಯಲು ಬಂದ ಸಿಂಹಕ್ಕೆ ಪುಟ್ಟ ಆಮೆಯೊಂದು ಎದುರಾಗುತ್ತದೆ. ಸಿಂಹದ ಹೆಜ್ಜೆಯಷ್ಟು ಇರುವ ಆಮೆಯು ಸಿಂಹವನ್ನು ಎದುರಿಸುವ ರೀತಿಯೂ ಅಚ್ಚರಿ ಮೂಡಿಸಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊವು ಸಿಂಹವು ಹೊಂಡದಲ್ಲಿ ನೀರು ಕುಡಿಯುತ್ತಿರುವ ಅದ್ಭುತವಾದ ಶಾಟ್‌ನೊಂದಿಗೆ ಪ್ರಾರಂಭವಾಗುತ್ತದೆ. ಹೊಂಡದಲ್ಲಿ ಪುಟ್ಟ ಆಮೆ ಹರಿದಾಡುತ್ತಿರುತ್ತದೆ.
ಆಮೆಯು ತನ್ನ ಚಿಕ್ಕ ತಲೆಯಿಂದ ಬಲಶಾಲಿಯಾದ ಸಿಂಹವನ್ನು ತಳ್ಳಲು ಪ್ರಾರಂಭಿಸುತ್ತದೆ. ಸಿಂಹ ಈ ಪುಟ್ಟ ಪ್ರಾಣಿಯ ದಿಟ್ಟತನವನ್ನು ತಲೆಕೆಡಿಸಿಕೊಂಡಂತೆ ತೋರುವುದಿಲ್ಲ. ಆಮೆಯನ್ನ ಸಿಂಹ ನೂಕುವುದನ್ನು ಮುಂದುವರೆಸಿದರೆ, ಆಮೆ ಪದೇ ಪದೇ ಸಿಂಹದ ಬಾಯಿಯ ಹತ್ತಿರ ಬರುತ್ತಿರುತ್ತದೆ. ಕೊನೆಯಲ್ಲಿ ಸಿಂಹ ನೀರು ಕುಡಿದು ಹೋಗುತ್ತದೆ. ವಿಡಿಯೋಗೆ “ಆಮೆ ತನ್ನ ನೀರಿನ ಹೊಂಡದಿಂದ ಸಿಂಹವನ್ನು ಓಡಿಸುತ್ತದೆ” ಎಂಬ ಶೀರ್ಷಿಕೆ ನೀಡಲಾಗಿದೆ.
ಸಿಂಹ ಮತ್ತು ಆಮೆಯ ನಡುವಿನ ಈ ಅಸಂಭವ ಸನ್ನಿವೇಶ ವಿನೋದಮಯವಾಗಿದ್ದು ಪ್ರಕೃತಿಯು ಎಷ್ಟು ಆಕರ್ಷಕ ಮತ್ತು ಅನಿರೀಕ್ಷಿತವಾಗಿದೆ ಎಂಬುದನ್ನು ತೋರುತ್ತದೆ.
https://youtu.be/cvHOMVOTQyE