ಐಷಾರಾಮಿ ಅಂಗಡಿಯಲ್ಲಿ ಶಾಪಿಂಗ್ ಮಾಡುವಾಗ ಕತಾರ್‌ನ ದೋಹಾ ವಿಮಾನ ನಿಲ್ದಾಣದಲ್ಲಿ ಭಾರತೀಯ ಕರೆನ್ಸಿಯನ್ನು ಬಳಸಲು ಸಾಧ್ಯವಾಯಿತು ಎಂದು ಗಾಯಕ ಮಿಕಾ ಸಿಂಗ್ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು “ಶುಭೋದಯ. ದೋಹಾ ಏರ್ ಪೋರ್ಟ್ ನಲ್ಲಿ ಶಾಪಿಂಗ್ ಮಾಡುವಾಗ ಭಾರತೀಯ ರೂಪಾಯಿಯನ್ನು ಬಳಸಲು ನನಗೆ ತುಂಬಾ ಹೆಮ್ಮೆ ಅನಿಸಿತು. ನೀವು ಯಾವುದೇ ರೆಸ್ಟೋರೆಂಟ್‌ನಲ್ಲಿಯೂ ಭಾರತದ ಕರೆನ್ಸಿಯನ್ನ ಬಳಸಬಹುದು. ಅದು ಅದ್ಭುತವಲ್ಲವೇ? ನಮ್ಮ ಹಣವನ್ನು ಡಾಲರ್‌ನಂತೆ ಬಳಸಲು ನಮಗೆ ಅನುವು ಮಾಡಿಕೊಟ್ಟಿದ್ದಕ್ಕೆ ನರೇಂದ್ರಮೋದಿ ಸಾಬ್ ಅವರಿಗೆ ಒಂದು ಬೃಹತ್ ನಮಸ್ಕಾರ “ಎಂದು ಮಿಕಾ ಸಿಂಗ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಟ್ವಿಟ್ಟರ್ ಬಳಕೆದಾರರು ಇದಕ್ಕೆ ಥಂಬ್ಸ್ ಅಪ್ ನೀಡಿದ್ದು , ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಈ ವಿಷಯವನ್ನ ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಕ್ಕಾಗಿ ಮಿಕಾ ಸಿಂಗ್ ಅವರನ್ನು ಶ್ಲಾಘಿಸಿದ್ದಾರೆ.