ದಿನೇ ದಿನೇ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದ್ದು ಮಹಾರಾಷ್ಟ್ರದಲ್ಲಿ ದಾಖಲೆ ಮಟ್ಟದಲ್ಲಿ ಕೊರೊನಾ ಕೇಸ್ ಜೊತೆಗೆ ಸಾವಿನ ಸಂಖ್ಯೆಯೂ ದಾಖಲಾಗಿದೆ. ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ ಒಂಬತ್ತು ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಇದು ರಾಜ್ಯದಲ್ಲಿ ಇತ್ತೀಚಿನ ಸೋಂಕಿನ ವರದಿಗಳಲ್ಲೇ ಅತಿ ಹೆಚ್ಚು. ಸರ್ಕಾರದ ಇತ್ತೀಚಿನ ಬುಲೆಟಿನ್ ಪ್ರಕಾರ ಮಹಾರಾಷ್ಟ್ರದಲ್ಲಿ 1,115 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಇವುಗಳಲ್ಲಿ 320 ಹೊಸ ಪ್ರಕರಣಗಳು ಮತ್ತು ಎರಡು ಸಾವು ರಾಜ್ಯ ರಾಜಧಾನಿ ಮುಂಬೈನಿಂದ ವರದಿಯಾಗಿವೆ. ಮುಂಬೈನಲ್ಲಿ ಕೋವಿಡ್ ಪಾಸಿಟಿವಿಟಿ ದರ 14.57% ಇದೆ.
ಪ್ರಸ್ತುತ ಮಹಾರಾಷ್ಟ್ರ ರಾಜ್ಯದಲ್ಲಿ 5,421 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 1,577 ಮುಂಬೈನಲ್ಲಿವೆ. ನಿನ್ನೆಯಷ್ಟೇ ಮಹಾರಾಷ್ಟ್ರದಲ್ಲಿ 919 ಹೊಸ ಕೋವಿಡ್ ಪ್ರಕರಣಗಳು ಮತ್ತು ಒಂದು ಸಾವು ವರದಿಯಾಗಿತ್ತು.
Omicron ನ XBB.1.16 ಸಬ್‌ವೇರಿಯಂಟ್‌ನಿಂದ ಕೊರೊನಾ ವೈರಸ್ ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿವೆ. ಆದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗುವುದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವಾಲಯದ ಮೂಲಗಳು ಇಂದು ಪ್ರತಿಪಾದಿಸಿವೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 7,830 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ, ಇದು ಏಳು ತಿಂಗಳಲ್ಲೇ ಅತಿ ಹೆಚ್ಚು.
ಮುಂದಿನ 10-12 ದಿನಗಳವರೆಗೆ ಪ್ರಕರಣಗಳು ಹೆಚ್ಚಾಗುತ್ತಲೇ ಇರುತ್ತವೆ ಮತ್ತು ನಂತರ ಕಡಿಮೆಯಾಗುತ್ತವೆ ಎಂದು ಮೂಲಗಳು ತಿಳಿಸಿವೆ.