ಮದುವೆ ಮಂಟಪದಲ್ಲಿ ಪೇಚಿಗೆ ಸಿಕ್ಕ ವರ: ಪಂಡಿತರ ಮಾತು ಕೇಳಿ ವಧುವಿಗೆ ಆದ ಖುಷಿ ಅಷ್ಟಿಷ್ಟಲ್ಲ

ಮದುವೆ ಅಂದರೆ ಅಲ್ಲಿ ಸಂಭ್ರಮ ಸಡಗರ ಇದ್ದೇ ಇರುತ್ತೆ. ವಧು-ವರರಂತೂ ಮದುವೆ ದಿನದ ಒಂದೊಂದು ಘಳಿಗೆಯನ್ನೂ ನೆನಪಿನ ಬುತ್ತಿಯಲ್ಲಿ ಕಟ್ಟಿಡ್ತಿರ್ತಾರೆ. ಅಂತಹದ್ದೇ ಒಂದು ಸಂತಸದ ಘಳಿಗೆಯ ವಿಡಿಯೋ ಒಂದು ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಶುಭವಿವಾಹ ಅನ್ನೊ ಅಕೌಂಟ್‌ನಲ್ಲಿ ಅಪ್‌ಲೋಡ್ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಎಂಜಾಯ್ ಮಾಡ್ತಿದ್ದಾರೆ. ಈ ವಿಡಿಯೋ ಶೀರ್ಷಿಕೆಯಲ್ಲಿ, ‘ಪಂಡಿತರು ನಿಮಗೆ ದುಡಿದ ಹಣವೆಲ್ಲವನ್ನೂ ನಿಮ್ಮ ಹೆಂಡತಿಗೆ ಕೊಡಬೇಕು ಎಂದು ಅಗ್ನಿಯನ್ನ ಸಾಕ್ಷಿಯಾಗಿ ಕೇಳಿದಾಗ,’ ಎಂದು ಬರೆಯಲಾಗಿದೆ. ಅಸಲಿಗೆ ಮದುವೆ ಮಾಡಿಸಲು ಬಂದ ಪಂಡಿತರು, ಅಗ್ನಿ ಸಾಕ್ಷಿಯಾಗಿ ವರನಿಂದ ಕೆಲ ಪ್ರಮಾಣಗಳನ್ನು ಮಾಡಿಸಿಕೊಳ್ಳುತ್ತಾರೆ. ಅದರಲ್ಲಿ ಒಂದು ಮಾತು, ‘ನೀನು ಸಂಪಾದಿಸಿದ ಹಣವನ್ನೆಲ್ಲ ನಿನ್ನ ಧರ್ಮಪತ್ನಿಗೆ ಕೊಡಬೇಕು’ ಅಂತ ಇದನ್ನ ಕೇಳಿದಾಕ್ಷಣ ವರನಿಗೆ ಏನು ಹೇಳೋಕೋ ಗೊತ್ತಾಗದೇ ಪೇಚಾಡುತ್ತಿರ್ತಾನೆ. ಆದರೆ ಅಲ್ಲಿದ್ದವರೆಲ್ಲ ಜೋರಾಗಿ ನಕ್ಕು ಆ ನವದಂಪತಿಯನ್ನ ರೇಗಿಸುತ್ತಾರೆ.

ಒಂದು ಕಡೆ ಮದುವೆ ಗಂಡು ಕನ್ಫ್ಯೂಸ್ ಆಗಿದ್ರೆ, ಇನ್ನೊಂದು ಕಡೆ ವಧು ಖುಷಿಯಾಗಿ ‘ಹೋಯ್’ ಎಂದು ಕೂಗುತ್ತಾಳೆ. ಪೂಜಾರಿ ಮತ್ತೆ ‘ನಿನ್ನ ದುಡಿಮೆಯ ಹಣವನ್ನ ನಿನ್ನ ಹೆಂಡತಿಗೆ ಕೊಡಬೇಕು. ಅದನ್ನೆಲ್ಲ ಜೋಪಾನವಾಗಿ ಕಾಪಾಡುವ ಕೆಲಸ ಆಕೆಯದ್ದು ಎಂದು ಹೇಳುತ್ತಾರೆ. ಮದುವೆ ಹೆಣ್ಣು ಮತ್ತಷ್ಟು ಜೋರಾಗಿ ‘ವೋವ್’ ಎಂದು ಕೂಗು ಹಾಕುತ್ತಾಳೆ. ಆಗ ವರ ವಧುವಿಗೆ ‘ಅವರು ಹೇಳುವ ಮಾತನ್ನ ಸರಿಯಾಗಿ ಕೇಳು ಅಂತ ಹೇಳುತ್ತಾನೆ.’ ಆಗ ಆಕೆ ‘ನೀವು ಮೊದಲು ಅವರು ಹೇಳಿದ ಮಾತಿಗೆ ಒಪ್ಪಿಗೆ ಕೊಡು ನಂತರ ಉಳಿದದ್ದು ಅನ್ನುತ್ತಾಳೆ. ಆ ನಂತರ ಆತ ಪೂಜಾರಿ ಮಾತಿಗೆ ‘ಓಕೆ’ ಅಂತ ಹೇಳುತ್ತಾನೆ.

ಈ ವೀಡಿಯೋ ನೋಡಿ ಕೆಲವರು ಎಂಜಾಯ್ ಮಾಡಿದ್ರೆ, ಇನ್ನೂ ಕೆಲವರು ಇದರ ಬಗ್ಗೆ ಅಪಸ್ವರ ಎತ್ತಿದ್ದಾರೆ, ಪಂಡಿತರು ಹೇಳಿರೋ ಮಾತು ಎಷ್ಟು ಸರಿ ಅಂತ ಪುಶ್ನೆ ಮಾಡಿದ್ದಾರೆ. ದುಡಿದ ವ್ಯಕ್ತಿಗೆ ಹಣ ಖರ್ಚು ಮಾಡುವ ಸ್ವಾತಂತ್ರ್ಯ ಇಲ್ಲವಾ ಎಂದು ಹೇಳಿದ್ದಾರೆ.

https://youtu.be/AN_o3b087-U

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read