
ಅನೇಕ ಬಾರಿ ವ್ಯಕ್ತಿ ಮಾನಸಿಕ ಒತ್ತಡದಿಂದ ಬಳಲ್ತಾನೆ. ಇದು ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೊರ ಬರಲು ವೈದ್ಯರ ಬಳಿ ಹೋಗ್ತಾರೆ ಜನರು. ಆದ್ರೆ ವೈದ್ಯರಿಂದ ಯಾವುದೇ ಪರಿಹಾರ ಸಿಗೋದಿಲ್ಲ.
ಇದಕ್ಕೆ ವಾಸ್ತು ದೋಷವೂ ಕಾರಣವಾಗುತ್ತದೆ. ಕೆಲವೊಂದು ಸಣ್ಣಪುಟ್ಟ ವಾಸ್ತು ದೋಷಗಳನ್ನು ಸರಿಪಡಿಸಿಕೊಂಡ್ರೆ ನೀವು ಸುಲಭವಾಗಿ ಮಾನಸಿಕ ನೆಮ್ಮದಿ ಪಡೆಯಬಹುದಾಗಿದೆ.
ಮಲಗುವ ಕೋಣೆಯಲ್ಲಿ ಮದ್ಯ ಸೇವನೆ ಮಾಡಬೇಡಿ. ಇದು ಒತ್ತಡವನ್ನು ಹೆಚ್ಚು ಮಾಡುತ್ತದೆ. ಜೊತೆಗೆ ಕೆಟ್ಟ ಕನಸು ಬೀಳುವ ಜೊತೆಗೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡುತ್ತವೆ.
ಮನೆಗೆ ತಿಳಿ ಕಲರ್ ಬಣ್ಣ ಬಳಿಯಿರಿ. ಇದ್ರಿಂದ ಮನೆಯಲ್ಲಿ ನೆಮ್ಮದಿ, ಖುಷಿ ನೆಲೆಸಿ ಒತ್ತಡ ಕಡಿಮೆಯಾಗುತ್ತದೆ.
ಅಡುಗೆ ಮನೆಯಲ್ಲಿ ಕಪ್ಪು ಬಣ್ಣದ ಕಲ್ಲುಗಳ ಪ್ರಯೋಗ ಮಾಡಬಾರದು. ಇದ್ರ ಮೇಲೆ ಬೀಳುವ ಕೆಲವೊಂದು ವಸ್ತುಗಳು ಕಣ್ಣಿಗೆ ಕಾಣುವುದಿಲ್ಲ. ಆದ್ರೆ ಬಿದ್ದ ವಸ್ತು ಕಾಣದೆ ನಮಗೆ ತೊಂದರೆಯಾಗುತ್ತದೆ. ಹಾಗಾಗಿ ಅಡುಗೆ ಮನೆಗೆ ತಿಳಿ ಬಣ್ಣದ ಕಲ್ಲನ್ನು ಬಳಸಬೇಕು.
ಬೆಳಗಿನ ಪೂಜೆಯನ್ನು 6 ಗಂಟೆಯಿಂದ 8 ಗಂಟೆಯೊಳಗೆ ಮಾಡಬೇಕು. ಪೂಜೆ ವೇಳೆ ಹತ್ತಿ ಅಥವಾ ಉಣ್ಣೆ ಬಟ್ಟೆಯನ್ನು ಬಳಸಬೇಕು.
ಮನೆಯಲ್ಲಿ ತಿಳಿ ಬಣ್ಣದ ಸೋಫಾ ಹಾಕಿ. ಇದ್ರಿಂದ ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ.