ಬೆಳಗಾವಿ: ಅಥಣಿ ಬಿಜೆಪಿ ಟಿಕೆಟ್ ಮಹೇಶ್ ಕುಮಟಳ್ಳಿಗೆ ಸಿಗುವ ವಿಶ್ವಾಸವಿದೆ. ಗೆಲ್ಲುವುದು ಸೋಲುವುದು ದೇವರ ಇಚ್ಛೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಅಥಣಿ ಟಿಕೆಟ್ ಗಾಗಿ ಮಹೇಶ್ ಕುಮಟಳ್ಳಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಫೈಟ್ ವಿಚಾರವಾಗಿ, ಕುಮಟಳ್ಳಿಗೆ ಟಿಕೆಟ್ ಸಿಗುತ್ತೆ. ಯಾಕಿಷ್ಟು ಚಡಪಡಿಸ್ತೀಯಾ ಲಕ್ಷ್ಮಣಣ್ಣಾ? ಸ್ವಲ್ಪ ಆರಾಮವಾಗಿರು ಎಂದು ಟಾಂಗ್ ನೀಡಿದ್ದಾರೆ.
ನಾನು ಹಾಗೂ ಲಕ್ಷ್ಮಣ ಸವದಿ ಸಣ್ಣ ಗಿಡದ ತಪ್ಪಲು. ರಾಷ್ಟ್ರೀಯ ನಾಯಕರು ಹೆಮ್ಮರವಾಗಿದ್ದಾರೆ. ಅವರು ನಿರ್ಣಯಿಸುತ್ತಾರೆ. ಚಡಪಡಿಕೆ ಬೇಡ ದಯವಿಟ್ಟು ಆರಾಮವಾಗಿರುವ ಎಂದಿದ್ದಾರೆ.
ಮಹೇಶ್ ಕುಮಟಳ್ಳಿ ಜೊತೆಗೆ ಶ್ರೀಮಂತ ಪಾಟೀಲ್ ಸೇರಿ ಎಲ್ಲರೀಗೂ ಟಿಕೆಟ್ ಸಿಗುತ್ತೆ. ಈ ಹಿಂದೆ ಬಿಜೆಪಿಗೆ ಸೇರಿದ 17 ಶಾಸಕರಿಗೂ ಹೈಕಮಾಂಡ್ ಆಶಿರ್ವಾದವಿದೆ. ನೂರಕ್ಕೆ ನೂರರಷ್ಟು ಎಲ್ಲರಿಗೂ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.