ಆಸ್ಟ್ರೇಲಿಯನ್ ಸಂಶೋಧಕರು ನಡೆಸಿದ ಹೊಸ ಮೆಟಾ-ವಿಶ್ಲೇಷಣೆಯ ಅಡಿಯಲ್ಲಿ ಪ್ರಕೃತಿ ಸ್ನಾನವನ್ನು ಶಿಫಾರಸು ಮಾಡುವುದನ್ನು ನೋಡಬಹುದು. ಮಾನಸಿಕ ಆರೋಗ್ಯಕ್ಕೆ ಇದು ಪ್ರಯೋಜನಕಾರಿಯಾಗಿದೆ ಎನ್ನುವುದನ್ನು ಕಂಡುಹಿಡಿಯಲಾಗಿದೆ. ಜಡ ಜೀವನಶೈಲಿಯ ವಿರುದ್ಧ ಹೋರಾಡಲು ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಖಿನ್ನತೆಗೆ ಒಳಗಾಗುತ್ತಿದ್ದೀರಾ ಅಥವಾ ಆತಂಕಕ್ಕೆ ಒಳಗಾಗುತ್ತಿದ್ದೀರಾ? ಪ್ರಕೃತಿ ಸ್ನಾನ ಮಾಡಲು ಪ್ರಯತ್ನಿಸಿ ಎಂದಿದ್ದಾರೆ ಸಂಶೋಧಕರು. ಹೆಚ್ಚು ಹೆಚ್ಚು ವೈದ್ಯರು ತಮ್ಮ ರೋಗಿಗಳು ಪ್ರಕೃತಿಯೊಂದಿಗೆ ಸಮಯ ಕಳೆಯಲು ಶಿಫಾರಸು ಮಾಡುತ್ತಾರೆ. ಮತ್ತು ಇದರ ಹಿಂದೆ ಗಂಭೀರ ಕಾರಣಗಳಿವೆ. ಕೆಲವು ದೇಶಗಳಲ್ಲಿ, ನಿಸರ್ಗ ಸ್ನಾನವನ್ನು ವೈದ್ಯರು ಶಿಫಾರಸು ಮಾಡುತ್ತಾರೆ.
ಜಪಾನ್, ಸ್ಕಾಟ್ಲೆಂಡ್ ಮತ್ತು ಯುನೈಟೆಡ್ ಸ್ಟೇಟ್ನಲ್ಲಿ ಇದು ಗಮನಾರ್ಹವಾಗಿದೆ. ಹಾಗೆಯೇ ಕೆನಡಾದಲ್ಲಿ, 2020 ರಲ್ಲಿ PaRx ಪ್ರೋಗ್ರಾಂ ಅನ್ನು ಪ್ರಾರಂಭಿಸಲಾಯಿತು. ಬ್ರಿಟಿಷ್ ಕೊಲಂಬಿಯಾ ಪಾರ್ಕ್ಸ್ ಫೌಂಡೇಶನ್ನಿಂದ ಇದು ಪ್ರಾರಂಭಿಸಲ್ಪಟ್ಟಿದೆ, ಇದರ ಅಡಿ ಪ್ರಕೃತಿ ಸ್ನಾನಕ್ಕೆ ಹೆಚ್ಚು ಮಹತ್ವ ಕೊಡಲಾಗಿದೆ. ಜನರು ಪ್ರಕೃತಿಯಲ್ಲಿ ಸಮಯವನ್ನು ಆನಂದಿಸಬೇಕು ಎನ್ನುತ್ತಾರೆ ಸಂಶೋಧಕರು.
ಪ್ರಕೃತಿ ಸ್ನಾನವನ್ನು ಹೆಚ್ಚಾಗಿ ಸೂಚಿಸುವ ಸ್ಥಳಗಳೆಂದರೆ ಅರಣ್ಯಗಳು ಮತ್ತು ನಿಸರ್ಗ ಮೀಸಲು (35%), ಉದ್ಯಾನವನಗಳು (28%), ಸಣ್ಣ ಸಮುದಾಯ ಅಥವಾ ಕುಟುಂಬ ಉದ್ಯಾನಗಳು (16%) ಮತ್ತು ಸಸ್ಯಶಾಸ್ತ್ರೀಯ ಉದ್ಯಾನಗಳು (11%).