ಇತ್ತೀಚೆಗಷ್ಟೇ ಎಲೋನ್ ಮಸ್ಕ್ ಟ್ವಿಟ್ಟರ್ ಲೋಗೋವನ್ನು ಬದಲಾಯಿಸಿದ್ದರು. ನೀಲಿ ಹಕ್ಕಿ ಹೋಗಿ ನಾಯಿ ಚಿತ್ರವನ್ನು ಲೋಗೋ ಆಗಿ ಇರಿಸಿದ್ದರು. ಇದು ವಿಶ್ವದೆಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗಿತ್ತು.
ಇದೀಗ ಈ ಹಿಂದೆ ಇದ್ದ ನೀಲಿ ಹಕ್ಕಿ ಮೈಕ್ರೋಬ್ಲಾಗಿಂಗ್ ಸೈಟ್‌ಗೆ ಮರಳಿದೆ. ಅಲ್ಪಾವಧಿಗೆ ಮಸ್ಕ್ ಹೀಗೇಕೆ ಮಾಡಿದ್ರು ಅನ್ನೋದು ನೆಟ್ಟಿಗರ ಗೊಂದಲಕ್ಕೆ ಕಾರಣವಾಗಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಮೆಮೆ ಹಾವಳಿಯೇ ಸೃಷ್ಟಿಯಾಗಿದೆ.
ಇದು ಬಿಲಿಯನೇರ್ ಮಸ್ಕ್ ರ ಏಪ್ರಿಲ್ ಫೂಲ್‌ನ ತಮಾಷೆಯಾಗಿರಬಹುದು ಎಂದು ಕೆಲವರು ಭಾವಿಸಿದ್ದಾರೆ. ಯಾವುದೇ ಕಾರಣವಿಲ್ಲದೆ, ಚಿಕ್ಕ ನೀಲಿ ಹಕ್ಕಿ ಮತ್ತೆ ಹಿಂತಿರುಗಿದೆ. ಅಲ್ಲದೆ, ಸಾಮಾಜಿಕ ಮಾಧ್ಯಮದ ಗಮನವನ್ನು ಸೆಳೆಯಲು ಅನಿರೀಕ್ಷಿತ ನಡವಳಿಕೆಗೆ ಹೆಸರುವಾಸಿಯಾದ ಮಸ್ಕ್‌ಗೆ ಇಂತಹ ನವೀಕರಣಗಳು ತುಂಬಾ ಸಾಮಾನ್ಯವಾಗಿದೆ.
ಟ್ವಿಟರ್‌ನಲ್ಲಿ ನಾಯಿಯ ಲೋಗೋ ವೆಬ್ ಬಳಕೆದಾರರಿಗೆ ಮಾತ್ರವೇ ಕಾಣಿಸಿದೆ. ಆ್ಯಪ್ ಬಳಕೆದಾರರಿಗೆ ಟ್ವಿಟ್ಟರ್ ಲೋಗೋದಲ್ಲಿ ಯಾವುದೇ ಬದಲಾವಣೆ ಕಾಣಿಸಿಕೊಂಡಿಲ್ಲ. ಅವರಿಗೆ ಕೇವಲ ನೀಲಿ ಹಕ್ಕಿ ಕಾಣಿಸುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಇದೀಗ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಇನ್ನು ಟ್ವಿಟ್ಟರ್ ನ ಹಕ್ಕಿಯ ಲೋಗೋವನ್ನು ನಾಯಿಗೆ ಬದಲಾಯಿಸಿದ ನಂತರ, ಮಸ್ಕ್ ಅದರ ಬಗ್ಗೆಯೂ ತಮಾಷೆ ಮಾಡಿದ್ದಾರೆ. ಹಳೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿರುವ ಅವರು, ಅದರಲ್ಲಿ ಬಳಕೆದಾರರೊಂದಿಗೆ ತಮಾಷೆಯಲ್ಲಿ ತೊಡಗಿದ್ದರು. ಅದರಲ್ಲಿ ಅವರು ಟ್ವಿಟರ್ ಅನ್ನು ಖರೀದಿಸಿ, ಲೋಗೋವನ್ನು ನಾಯಿಗೆ ಬದಲಾಯಿಸಬೇಕು ಎಂದು ಹೇಳಿದರು. ಸ್ಕ್ರೀನ್‌ಶಾಟ್ ಹಂಚಿಕೊಂಡ ಅವರು, ಭರವಸೆ ನೀಡಿದಂತೆ ಕಂಪನಿಯ ಲೋಗೋವನ್ನು ಬದಲಾಯಿಸಲಾಗಿದೆ ಎಂದು ತಮಾಷೆಯ ಮಾತುಗಳನ್ನಾಡಿದ್ದಾರೆ.
https://twitter.com/WolfieSmiffed/status/1644294602961170432?ref_src=twsrc%5Etfw%7Ctwcamp%5Etweetembed%7Ctwterm%5E1644294602961170432%7Ctwgr%5Ee8a47f1053c7cb544be1f6c326197ae0621e8dee%7Ctwcon%5Es1_&ref_url=https%3A%2F%2Fwww.freepressjournal.in%2Fviral%2Ftwitter-brings-back-blue-bird-internet-empthasises-with-doge-memes-do-pal-ki-khushi