ಸಾಮಾನ್ಯವಾಗಿ ಕೋವಿಡ್ ಸೋಂಕು ಹನಿಗಳ ಮೂಲಕ ಹಬ್ಬುತ್ತದೆ ಎಂದು ನಂಬಲಾಗಿದೆ. ಆದರೆ ಭಾರತೀಯ ಮೂಲದ ಸಂಶೋಧಕರೊಬ್ಬರು ಇದಕ್ಕೆ ಭಿನ್ನವಾದ ಅಂಶವೊಂದನ್ನು ವಿವರಿಸುತ್ತಾರೆ.
ಜನರ ಕೈಗಳು ಹಾಗೂ ಗೃಹಬಳಕೆ ವಸ್ತುಗಳು ಸಹ SARS-CoV-2 ಪಸರುವಿಕೆಗೆ ಹೇಗೆ ಕಾರಣವಾಗುತ್ತವೆ ಎಂದು ’ದಿ ಲ್ಯಾನ್ಸೆಟ್ ಮೈಕ್ರೋಬ್’ನಲ್ಲಿ ಪ್ರಕಟಗೊಂಡ ಈ ಅಧ್ಯಯನ ವರದಿ ತಿಳಿಸುತ್ತದೆ.
“ನಿಮಗೆ ಕೋವಿಡ್-19 ಸೋಂಕು ತಗುಲಿದ್ದರೆ ನೀವು ಈ ವೈರಾಣುವನ್ನು ಮೈಕ್ರೋ-ಏರೋಸಾಲ್‌ಗಳ ಮೂಲಕ ಗಾಳಿಯಲ್ಲಿ ಹಬ್ಬಿಸುತ್ತಿರುವಿರಿ ಎಂಬ ಬಗ್ಗೆ ಅನುಮಾನವಿಲ್ಲ. ಇದರೊಂದಿಗೆ ನಿಮ್ಮ ಕೈಗಳ ಮೇಲೆ ಬೀಳುವ ಗೊಣ್ಣೆಯ ಹನಿಗಳು ಹಾಗೂ ನಿಮ್ಮ ಸುತ್ತಲಿನ ನೆಲದ ಮೇಲೂ ನೀವು SARS-CoV-2 ಸೋಂಕನ್ನು ಈ ವೇಳೆ ಹಬ್ಬಿಸುತ್ತಿದ್ದೀರಿ,” ಎಂದು ಇಂಪೀರಿಯಲ್ ಕಾಲೇಜ್ ಆಫ್ ಲಂಡನ್‌ನ ಪ್ರಾಧ್ಯಾಪಕ ಅಜಿತ್ ಲಲ್ವಾನಿ ನೇತೃತ್ವದ ಅಧ್ಯಯನ ತಂಡ ತಿಳಿಸಿದೆ.
ಸೋಂಕಿತರ ಕೈಗಳಲ್ಲಿ SARS-CoV-2 ವೈರಾಣುಗಳಿದ್ದಾಗ ಅವರಿಂದ ಅನ್ಯರಿಗೆ ಸೋಂಕು ಪಸರುವ ಸಾಧ್ಯತೆ, ಹೀಗೆ ಕೈಗಳ ಮೇಲೆ ಸೂಕ್ಷ್ಮಜೀವಿಗಳು ಇಲ್ಲದಿದ್ದಾಗ ಆಗುವುದರ 1.7 ಪಟ್ಟು ಇರುತ್ತದೆ ಎಂದು ಅಧ್ಯಯನ ವರದಿಗಳು ತಿಳಿಸುತ್ತವೆ.
ಹಾಗೇ, ಸೋಂಕಿತರ ಮನೆಯಲ್ಲಿರುವ ವಸ್ತುಗಳು ಅವರ ಕೈಗಳಿಂದ ಮುಟ್ಟಲ್ಪಟ್ಟಿದ್ದಾಗ, ಅದರಿಂದ ಅನ್ಯರಿಗೆ ಸೋಂಕು ಪಸರುವ ಸಾಧ್ಯತೆ 3.8 ಪಟ್ಟಿನಷ್ಟಿರುತ್ತದೆ ಎಂದೂ ತಿಳಿಸಲಾಗಿದೆ.