alex Certify ಅಚ್ಚರಿಗೊಳಿಸುವಂತಿದೆ ಮದುವೆಯಾಗಬೇಕಿದ್ದ ವಧು – ವರ ಪೊಲೀಸ್‌ ಠಾಣೆ ಮುಂದೆ ಧರಣಿ ಕುಳಿತ ಕಾರಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೊಳಿಸುವಂತಿದೆ ಮದುವೆಯಾಗಬೇಕಿದ್ದ ವಧು – ವರ ಪೊಲೀಸ್‌ ಠಾಣೆ ಮುಂದೆ ಧರಣಿ ಕುಳಿತ ಕಾರಣ….!

ವಿಚಿತ್ರ ಘಟನೆಯಲ್ಲಿ ವಧು-ವರ, ಸಂಬಂಧಿಕರೊಂದಿಗೆ ಮದುವೆ ವೇದಿಕೆಯಿಂದ ಹೊರಬಂದು ಪೊಲೀಸರು ರಾತ್ರಿ ವೇಳೆ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಮಧ್ಯಪ್ರದೇಶದ ಜಿಆರ್‌ಪಿ ಪೊಲೀಸ್ ಠಾಣೆಯಲ್ಲಿ ಧರಣಿ ಕುಳಿತಿದ್ದಾರೆ. ಆದರೆ ಮದುವೆಯಲ್ಲಿ ಡಿಜೆ ಸದ್ದು ಜೋರಾಗಿದ್ದರಿಂದ ನಿಲ್ಲಿಸಲು ಮದುವೆಗೆ ಆಗಮಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ಮನವೊಲಿಕೆ ನಂತರ ಧರಣಿ ಕುಳಿತಿದ್ದ ವಧು-ವರರು ಗುರುವಾರ ರಾತ್ರಿ 2 ಗಂಟೆ ಸುಮಾರಿಗೆ ವಿವಾಹ ಕಾರ್ಯಕ್ರಮಕ್ಕೆ ಒಪ್ಪಿಗೆ ಸೂಚಿಸಿದರು.

ಈ ಪ್ರಕರಣವು ರತ್ಲಾಮ್‌ನ ರೈಲ್ವೇ ಕಾಲೋನಿ ಪ್ರದೇಶದಲ್ಲಿ ನಡೆದಿದೆ. ವರ ಅಜಯ್ ಸೋಲಂಕಿ ಮತ್ತು ವಧು ಸೀಮಾ ಸ್ಥಳೀಯ ಮದುವೆ ಮಂಟಪದಲ್ಲಿ ಮದುವೆಯಾಗುತ್ತಿದ್ದರು.

ಈ ವೇಳೆ ಇಂಡಸ್ಟ್ರಿಯಲ್ ಪೊಲೀಸ್ ಠಾಣೆಯ ಚೀತಾ ಫೋರ್ಸ್‌ನ ಇಬ್ಬರು ಅಧಿಕಾರಿಗಳಾದ ಶೋಭರಾಮ್ ಮತ್ತು ಪಂಕಜ್, ಮದುವೆ ಮನೆಯಲ್ಲಿ ಜೋರಾದ ಡಿಜೆ ಕೇಳಿ ಇಬ್ಬರೂ ಮದುವೆಯ ಲಾನ್‌ಗೆ ಹೋಗಿ ಅಲ್ಲಿದ್ದವರನ್ನು ನಿಲ್ಲಿಸುವಂತೆ ಕೇಳಿಕೊಂಡರು. ಅಲ್ಲಿದ್ದ ಅತಿಥಿಗಳೊಂದಿಗೆ ವಾಗ್ವಾದ ನಡೆಸಿದರು.

ಪೊಲೀಸರ ಅನುಚಿತ ವರ್ತನೆಯಿಂದ ಕುಪಿತಗೊಂಡ ಸೋಲಂಕಿ ಕುಟುಂಬದ ಸದಸ್ಯರು, ಇಂಡಸ್ಟ್ರಿಯಲ್ ಏರಿಯಾ ಪೊಲೀಸ್ ಸ್ಟೇಷನ್ ನಿಂದ ಜಿಆರ್‌ಪಿ ಪೊಲೀಸ್ ಠಾಣೆಗೆ ಹೋಗಿ ಧರಣಿ ಕುಳಿತರು.

ವರ ಅಜಯ್ ಸೋಲಂಕಿ ಪ್ರಕಾರ, ಪೊಲೀಸರಾದ ಪಂಕಜ್ ಬೊರಾಸಿ ಮತ್ತು ಶೋಭರಾಮ್ ಅವರು ಮೊದಲು ಅಸಭ್ಯ ಭಾಷೆ ಬಳಸಿ ಡಿಜೆ ನಿಲ್ಲಿಸಿದರು. ಅಲ್ಲಿದ್ದ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸತೊಡಗಿದರು. ಇಬ್ಬರೂ ಪೊಲೀಸರು ಅಮಲೇರಿದ ಸ್ಥಿತಿಯಲ್ಲಿದ್ದರು ಎಂದು ಆರೋಪಿಸಿ ಅವರ ವೈದ್ಯಕೀಯ ಪರೀಕ್ಷೆಗೆ ಒತ್ತಾಯಿಸಿದರು.

ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾತನಾಡಿ ಹನುಮ ಜಯಂತಿ ನಿಮಿತ್ತ ಇಡೀ ನಗರದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರು. ಪೊಲೀಸ್ ಠಾಣೆಯ ಪಕ್ಕದಲ್ಲಿರುವ ರೈಲ್ವೇ ಕಾಲೋನಿ ಪ್ರದೇಶದಲ್ಲಿ ಡಿಜೆ ಜೋರಾಗಿ ಕೇಳಿಬರುತ್ತಿದೆ ಎಂಬ ಮಾಹಿತಿ ನಮಗೆ ಸಿಕ್ಕಿದ್ದು, ಅದನ್ನು ತಡೆಯಲು ಪೊಲೀಸರು ಹೋಗಿದ್ದರು. ನಮ್ಮ ಚೀತಾ ಪಡೆಯ ಸಿಬ್ಬಂದಿ ಕೂಡ ಅಲ್ಲಿಗೆ ತಲುಪಿದ್ದರು. ಡಿಜೆ ನಿಲ್ಲಿಸಿದ್ದರಿಂದ ಕೋಪಗೊಂಡ ವಧು-ವರರು ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದು, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...