ಅಮೆರಿಕನ್ ಯೂಟ್ಯೂಬರ್ ಮತ್ತು ರೆಪ್ಟೈಲ್ ಝೂ ನ ಮುಖ್ಯಸ್ಥರಾದ ಜೇ ಬ್ರೂವರ್ ಹಂಚಿಕೊಂಡಿರುವ ವಿಡಿಯೋವೊಂದು ಮತ್ತೆ ವೈರಲ್ ಆಗಿದ್ದು ಎದೆ ನಡುಗಿಸುತ್ತೆ.
ಸಾಮಾನ್ಯವಾಗಿ ಇವರು ಆಗಾಗ್ಗೆ ತನ್ನ ಮೃಗಾಲಯದ ಹಾವುಗಳು ಮತ್ತು ಇತರ ಸರೀಸೃಪಗಳ ಆಸಕ್ತಿದಾಯಕ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ.
ಕೆಲವು ದಿನಗಳ ಹಿಂದೆ ಅವರು ಮತ್ತೊಂದು ವೀಡಿಯೊವನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರ ಮೇಲೆ ದಾಳಿ ಮಾಡಲು ಯತ್ನಿಸಿದ ಹೆಬ್ಬಾವಿನಿಂದ ರಕ್ಷಿಸಿಕೊಳ್ಳುವುದನ್ನ ನೋಡಬಹುದು.
ಜೇ ಬ್ರೂವರ್ ಹೆಬ್ಬಾವಿನ ಕೆಲವು ಮೊಟ್ಟೆಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅವರು ಮೊಟ್ಟೆಗಳನ್ನು ಸುರಕ್ಷಿತವಾಗಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಹೆಬ್ಬಾವು ಅವರ ಮೇಲೆ ಏಕಾಏಕಿ ದಾಳಿ ಮಾಡಲು ಮುಂದಾಗುತ್ತದೆ. ಈ ವಿಡಿಯೋ ನೆಟ್ಟಿಗರ ಎದೆ ನಡುಗಿಸುತ್ತದೆ.
ಈ ವಿಡಿಯೋ ಕ್ಲಿಪ್ ಹಂಚಿಕೊಂಡಿರುವ ಬ್ರೂವರ್, “ಕೆಲವೊಮ್ಮೆ ರೆಟಿಕ್ಯುಲೇಟೆಡ್ ಹೆಬ್ಬಾವು ಮೊಟ್ಟೆಗಳನ್ನು ಉಳಿಸುವುದು ಧೈರ್ಯಶಾಲಿ ಕೆಲಸವಾಗಬಹುದು, ಆದರೆ ನಾನು ಈ ರೀತಿ ಮಾಡುವುದನ್ನು ಇಷ್ಟಪಡುತ್ತೇನೆ!” ಎಂದು ಶೀರ್ಷಿಕೆ ನೀಡಿದ್ದಾರೆ.
ಇಂಟರ್ನೆಟ್ ಬಳಕೆದಾರರು ವೀಡಿಯೊವನ್ನು ನೋಡಿದ ನಂತರ ಭಯಭೀತರಾಗಿದ್ದಾರೆ.