ದಾವಣಗೆರೆ: ಮಹಿಳೆ ಜೊತೆಗಿದ್ದ ವೇಳೆಯಲ್ಲಿ ಅಶ್ಲೀಲ ವಿಡಿಯೋ ಮಾಡಿ ಬೆದರಿಸಿ 1.50 ಲಕ್ಷ ರೂಪಾಯಿ ದೋಚಿದ್ದ ಆರೋಪಿಗಳನ್ನು ದಾವಣಗೆರೆಯ ವಿದ್ಯಾನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಹರೀಶ, ಚಂದ್ರು, ಗಂಗಾ ಮತ್ತು ಗಂಗಮ್ಮ ಬಂಧಿತ ಆರೋಪಿಗಳು. ಬಂಧಿತರಿಂದ 1.30 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತ ಆರೋಪಿ ಗಂಗಾ ದೂರುದಾರ ವ್ಯಕ್ತಿಗೆ ಕರೆ ಮಾಡಿ ಮಿಸ್ಡ್ ಕಾಲ್ ಆಗಿದೆ ಎಂದು ಪರಿಚಯಿಸಿಕೊಂಡಿದ್ದಾಳೆ. ನಂತರ ಕಷ್ಟ ಹೇಳಿಕೊಂಡು ವ್ಯಕ್ತಿಯಿಂದ ಹಣ ಪಡೆದುಕೊಂಡಿದ್ದಾಳೆ. ಬಳಿಕ ತನ್ನ ಸಹಚರರೊಂದಿಗೆ ಸೇರಿ ಸಂಚು ರೂಪಿಸಿ ಮಾರ್ಚ್ 26 ರಂದು ವ್ಯಕ್ತಿಯನ್ನು ಊಟಕ್ಕೆ ಮನೆಗೆ ಕರೆದಿದ್ದಾಳೆ.
ಸಿದ್ದವೀರಪ್ಪ ಬಡಾವಣೆಯ ಗಂಗಮ್ಮನ ಮನೆಗೆ ವ್ಯಕ್ತಿಯನ್ನು ಕರೆಸಿಕೊಂಡಿದ್ದ ಗಂಗಾ ಊಟ ಮುಗಿಸಿದ ನಂತರ ರೂಮಿಗೆ ಕರೆದುಕೊಂಡು ಹೋಗಿದ್ದಾಳೆ. ಇದೇ ವೇಳೆ ಅಲ್ಲೇ ಇದ್ದ ತಂಡದ ಇತರೆ ಆರೋಪಿಗಳು ಅವರನ್ನು ಬೆದರಿಸಿ ವಿಡಿಯೋ ಮಾಡಿ 30 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಯಾರಿಗಾದರೂ ವಿಷಯ ತಿಳಿಸಿದರೆ ಕೊಲೆ ಬೆದರಿಕೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ.
ಗಂಗಾ ಕೂಡ ಹೆದರಿದವಳಂತೆ ನಾಟಕ ಮಾಡಿದ್ದಾಳೆ. ನಂತರ ಹಣ ಕೊಟ್ಟ ವ್ಯಕ್ತಿ ವಿದ್ಯಾನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.