ಸಂಧಿವಾತ ವಯಸ್ಸಾದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸಮಸ್ಯೆ. ಕೀಲುಗಳಲ್ಲಿ ಉರಿಯೂತದಿಂದ ಉಂಟಾಗುವ ಒಂದು ರೀತಿಯ ನೋವು ಇದು. ಸಂಧಿವಾತವು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಒಂದು ಸಾಮಾನ್ಯ ಸ್ಥಿತಿಯಾಗಿದೆ.
ಇದರಲ್ಲಿ ಹಲವಾರು ವಿಧಗಳಿವೆ. ಎರಡು ಸಾಮಾನ್ಯ ವಿಧಗಳೆಂದರೆ ಅಸ್ಥಿಸಂಧಿವಾತ ಮತ್ತು ರುಮಟಾಯ್ಡ್ ಸಂಧಿವಾತ. ಅಸ್ಥಿಸಂಧಿವಾತವು ಕಾಲಾನಂತರದಲ್ಲಿ ಕೀಲುಗಳ ಸವೆತದಿಂದ ಉಂಟಾಗುತ್ತದೆ.
ರುಮಟಾಯ್ಡ್ ಸಂಧಿವಾತವು ಸ್ವಯಂ ನಿರೋಧಕ ಅಸ್ವಸ್ಥತೆಯಾಗಿದ್ದು, ಪ್ರತಿರಕ್ಷಣಾ ವ್ಯವಸ್ಥೆಯು ಕೀಲುಗಳ ಮೇಲೆ ದಾಳಿ ಮಾಡುತ್ತದೆ, ಉರಿಯೂತ ಮತ್ತು ನೋವನ್ನು ಉಂಟುಮಾಡುತ್ತದೆ. ಸಂಧಿವಾತದ ನೋವು ದೀರ್ಘಕಾಲದವರೆಗೆ ಕಾಡುತ್ತಿದ್ದರೆ ಅದಕ್ಕೆ ಕಾರಣ ನಿಮ್ಮ ಕೆಲವೊಂದು ಅಭ್ಯಾಸಗಳಿರಬಹುದು. ಅವು ಯಾವುವು ಎಂಬುದನ್ನು ತಿಳಿದುಕೊಂಡು ತಕ್ಷಣವೇ ಬದಲಾಯಿಸಿಕೊಳ್ಳಬೇಕು.
ವ್ಯಾಯಾಮ
ನಿಯಮಿತ ವ್ಯಾಯಾಮ ಮಾಡುವುದರಿಂದ ಸಂಧಿವಾತದ ನೋವನ್ನು ಕಡಿಮೆ ಮಾಡಬಹುದು. ಯೋಗ ಅಥವಾ ಸರಳ ವ್ಯಾಯಾಮ ಮಾಡುವುದು ಸೂಕ್ತ.
ಸ್ನಾನ
ಪ್ರತಿದಿನ ಬಿಸಿನೀರಿನಲ್ಲಿ ಸ್ನಾನ ಮಾಡುವ ಮೂಲಕ ಸಂಧಿವಾತದ ನೋವಿನಿಂದ ರಿಲೀಫ್ ಪಡೆಯಬಹುದು. ದೇಹದ ಯಾವೆಲ್ಲಾ ಭಾಗಗಳಲ್ಲಿ ನೋವಿದೆಯೋ ಅಲ್ಲೆಲ್ಲಾ ಬಿಸಿನೀರನ್ನು ಹಾಕಿಕೊಳ್ಳಿ.
ಆಹಾರ ಪದ್ಧತಿ
ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ ಸಂಧಿವಾತದ ನೋವನ್ನು ಕಡಿಮೆ ಮಾಡಬಹುದು. ನೋವನ್ನು ತಡೆಗಟ್ಟಲು ದೇಹಕ್ಕೆ ಅತ್ಯುತ್ತಮ ಪೋಷಣೆಯ ಅಗತ್ಯವಿದೆ. ಇದಕ್ಕಾಗಿ ವಿಟಮಿನ್‌ಗಳು ಮತ್ತು ಖನಿಜಗಳಾದ ವಿಟಮಿನ್ ಡಿ ಮತ್ತು ಸೆಲೆನಿಯಮ್‌ನಂತಹ ಪೂರಕಗಳನ್ನು ಸಹ ಬಳಸಬೇಕು.
ತುಪ್ಪ
ತುಪ್ಪ ಕೂಡ ಸಂಧಿವಾತದ ನೋವಿಗೆ ಪರಿಣಾಮಕಾರಿ ಮದ್ದು. ಇದರಲ್ಲಿ ಕಬ್ಬಿಣ ಮತ್ತು ವಿಟಮಿನ್ ಸಿ ಇರುವುದರಿಂದ ಇದು ಕೀಲುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.ಆದರೆ ಕೀಲು ನೋವನ್ನು ಹೆಚ್ಚಿಸುವ ವ್ಯಾಯಾಮಗಳನ್ನು ಮಾಡಬೇಡಿ. ಸಂಧಿವಾತ ನೋವಿನಿಂದ ಪರಿಹಾರವನ್ನು ಪಡೆಯಲು, ನೀವು ಕೀಲು ನೋವನ್ನು ಉಲ್ಬಣಗೊಳಿಸುವ ಚಟುವಟಿಕೆಗಳನ್ನು ಮಾಡುವುದನ್ನು ತಪ್ಪಿಸಬೇಕು. ಸರಿಯಾದ ವಿಶ್ರಾಂತಿ ತೆಗೆದುಕೊಳ್ಳಬೇಕು ಮತ್ತು ದೀರ್ಘಕಾಲ ಕುಳಿತುಕೊಳ್ಳಬಾರದು.