alex Certify ರಾಮನವಮಿ ವೇಳೆ ಹಿಂಸಾಚಾರ ಹಿನ್ನೆಲೆ; ಹನುಮ ಜಯಂತಿಗೆ ಕೇಂದ್ರ ಗೃಹ ಸಚಿವಾಲಯದಿಂದ ಮಹತ್ವದ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಮನವಮಿ ವೇಳೆ ಹಿಂಸಾಚಾರ ಹಿನ್ನೆಲೆ; ಹನುಮ ಜಯಂತಿಗೆ ಕೇಂದ್ರ ಗೃಹ ಸಚಿವಾಲಯದಿಂದ ಮಹತ್ವದ ಸೂಚನೆ

ರಾಮನವಮಿ ವೇಳೆ ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ನಡೆದ ಭಾರೀ ಗಲಭೆ ಪ್ರಕರಣಗಳಿಂದ ಎಚ್ಚೆತ್ತ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹನುಮ ಜಯಂತಿ ಆಚರಣೆಗೆ ಸಲಹೆ ನೀಡಿದೆ. ಆಚರಣೆ ವೇಳೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ತಿಳಿಸಿದೆ.

ರಾಜ್ಯ ಸರ್ಕಾರಗಳು ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ, ಹಬ್ಬದ ಶಾಂತಿಯುತ ಆಚರಣೆ ಮತ್ತು ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಭಂಗ ತರುವ ಯಾವುದೇ ಅಂಶಗಳ ಬಗ್ಗೆ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಗೃಹ ಇಲಾಖೆ ಹೇಳಿದೆ.

ರಾಮ ನವಮಿಯ ವೇಳೆ ಪಶ್ಚಿಮ ಬಂಗಾಳ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ಹಿಂಸಾಚಾರದ ಘಟನೆಗಳು ಜರುಗಿದ ನಡುವೆ ಈ ಸಲಹೆಗಳು ಬಂದಿವೆ. ಕೇಂದ್ರ ಗೃಹ ಇಲಾಖೆ ಆದೇಶಕ್ಕೂ ಮೊದಲು ಕೊಲ್ಕತ್ತಾ ಹೈಕೋರ್ಟ್ ರಾಮನವಮಿಯಂದು ಪಶ್ಚಿಮ ಬಂಗಾಳದಲ್ಲಿ ಜರುಗಿದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಕೇಂದ್ರ ಪಡೆಗಳ ಸಹಾಯ ಕೋರಲು ಸರ್ಕಾರಕ್ಕೆ ತಿಳಿಸಿತ್ತು.

ಸೆಕ್ಷನ್ 144 ಜಾರಿ ವೇಳೆಯೂ ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆದಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಿಮ್ಮಿಂದ ಆಗದಿದ್ದರೇ ಕೇಂದ್ರ ಪಡೆಗಳನ್ನು ಕರೆಸಿಕೊಳ್ಳಿ ಎಂದು ಮಮತಾ ಬ್ಯಾನರ್ಜಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಹೌರಾದಲ್ಲಿ ರಾಮನವಮಿ ವೇಳೆ ನಡೆದ ಹಿಂಸಾಚಾರದ ಕುರಿತು ಪಶ್ಚಿಮ ಬಂಗಾಳ ಸರ್ಕಾರದಿಂದ ಕೇಂದ್ರ ಗೃಹ ಸಚಿವಾಲಯ ಮಂಗಳವಾರ ವಿವರವಾದ ವರದಿ ಕೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...