![](https://kannadadunia.com/wp-content/uploads/2023/04/Untitled-design-27.jpg)
ರಾಮನವಮಿ ಆಚರಣೆಯ ನಂತರ ಬಿಹಾರದ ಕೆಲವು ಭಾಗಗಳಲ್ಲಿ ಭುಗಿಲೆದ್ದ ಹಿಂಸಾಚಾರದ ಕುರಿತು ಚರ್ಚೆಯ ವೇಳೆ ಗದ್ದಲ ಸೃಷ್ಟಿಸಿದ ಆರೋಪದ ಮೇಲೆ ಬಿಹಾರ ಬಿಜೆಪಿ ಶಾಸಕ ಜಿಬೇಶ್ ಕುಮಾರ್ ಅವರನ್ನು ರಾಜ್ಯ ವಿಧಾನಸಭೆಯಿಂದ ಹೊರಕ್ಕೆ ಕರೆತರಲಾಯಿತು.
ಜಿಬೇಶ್ ಕುಮಾರ್ ಅವರನ್ನು ನಾಲ್ವರು ಮಾರ್ಷಲ್‌ಗಳು ಹೊತ್ತೊಯ್ಯುತ್ತಿರುವ ಫೋಟೋಗಳು, ವಿಡಿಯೋ ಹರಿದಾಡ್ತಿವೆ.
ಮಾರ್ಷಲ್ ಅವರನ್ನು ಬಲವಂತವಾಗಿ ಕರೆದೊಯ್ತಿದ್ದಾಗ ಜಿಬೇಶ್ ಕುಮಾರ್ ವಿರೋಧ ಪಕ್ಷದ ನಾಯಕರನ್ನು ಹೀಗೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಹೇಳುವುದನ್ನು ಕೇಳಬಹುದು.
ಜಿಬೇಶ್ ಕುಮಾರ್ ವಿರುದ್ಧದ ಕ್ರಮದ ಕುರಿತು ಅವರು ಸ್ಪೀಕರ್ ಅವರನ್ನು ಅವಮಾನಿಸಿದ್ದಾರೆ ಎಂದು ಸರ್ಕಾರ ಹೇಳಿದೆ.
ಇಂದು ಪ್ರತಿಪಕ್ಷದ ಕೆಲವು ನಾಯಕರು ಸ್ಪೀಕರ್ ಅವರನ್ನು ಅವಮಾನಿಸಿದ್ದಾರೆ. ಇದು ವಿಧಾನಸಭೆಗೆ ಮಾಡಿದ ದೊಡ್ಡ ಅಪಚಾರವಾಗಿದೆ ಎಂದು ಬಿಹಾರದ ಕೃಷಿ ಸಚಿವ ಕುಮಾರ್ ಸರ್ವಜೀತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆಡಳಿತಾರೂಢ ಮಹಾಘಟಬಂಧನ್ ಸರ್ಕಾರವು ಸಸಾರಾಮ್ ಮತ್ತು ಬಿಹಾರ ಷರೀಫ್ ಪಟ್ಟಣಗಳಲ್ಲಿ ಕೋಮುಗಲಭೆಗಳನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಘರ್ಷಣೆಯಲ್ಲಿ ಬಿಜೆಪಿ-ಆರ್‌ಎಸ್‌ಎಸ್ ಕೈವಾಡವಿದೆ ಎಂದು ಸರ್ಕಾರ ಹೇಳಿದೆ.