ವಿಕ್ರಮಾದಿತ್ಯ ಸಮರನೌಕೆಯನ್ನೇರಿದ ಅಗ್ನಿವೀರರ ಮೊದಲ ಬ್ಯಾಚ್, ಮಹಿಳೆಯರನ್ನೂ ಒಳಗೊಂಡು, ಕಾರವಾರಕ್ಕೆ ಆಗಮಿಸಿದೆ. ವಿಕ್ರಮಾದಿತ್ಯ ಸಮರನೌಕೆಯ ಟ್ವಿಟರ್ ಹ್ಯಾಂಡಲ್, ಕಾರವಾರ ರೈಲ್ವೇ ನಿಲ್ದಾಣಕ್ಕೆ ಆಗಮಿಸುತ್ತಿರುವ ಅಗ್ನಿವೀರರ ಈ ವಿಡಿಯೋ ಶೇರ್ ಮಾಡಿಕೊಂಡಿದೆ.
ಭಾರತೀಯ ನೌಕಾಪಡೆಯ 2,585 ಅಗ್ನಿವೀರರ ಮೊದಲ ಬ್ಯಾಚ್‌ನ ಪಾಸಿಂಗ್ ಔಟ್ ಪರೇಡ್ ಒಡಿಶಾದಲ್ಲಿ ಐಎನ್‌ಎಸ್ ಚಿಲಿಕಾದಲ್ಲಿ ಮಾರ್ಚ್ 28ರಂದು ಜರುಗಿದೆ. ನಾಲ್ಕು ತಿಂಗಳ ಕಠಿಣ ತರಬೇತಿ ಪಡೆದಿದ್ದಾರೆ ಅಗ್ನಿವೀರರು.
ನೌಕಾಪಡೆಯ ಮುಖ್ಯ ಅಡ್ಮಿರಲ್ ಆರ್ ಹರಿ ಕುಮಾ ಪರೇಡ್‌ನ ರಿಸೀವಿಂಗ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.