HomeKarnatakaBIG NEWS: ಕಿಚ್ಚ ಸುದೀಪ್ ಪಕ್ಷ ಸೇರುವ ಸುಳಿವು ಇತ್ತು, ನಾನೇ ಹೇಳಲು ಹೋಗಿಲ್ಲ ಎಂದ...

BIG NEWS: ಕಿಚ್ಚ ಸುದೀಪ್ ಪಕ್ಷ ಸೇರುವ ಸುಳಿವು ಇತ್ತು, ನಾನೇ ಹೇಳಲು ಹೋಗಿಲ್ಲ ಎಂದ ಶಾಸಕ ರಾಜುಗೌಡ

ಯಾದಗಿರಿ: ನಟ ಕಿಚ್ಚ ಸುದೀಪ್ ಬಿಜೆಪಿಗೆ ಸೇರ್ಪಡೆಯಾದರೆ ಆನೆ ಬಲ ಬಂದಂತಾಗುತ್ತದೆ ಎಂದು ಬಿಜೆಪಿ ಶಾಸಕ ರಾಜುಗೌಡ ತಿಳಿಸಿದ್ದಾರೆ.

ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟ ಸುದೀಪ್ ಬಿಜೆಪಿ ಸೇರಿದ್ರೆ ಅಥವಾ ಬೆಂಬಲ ಕೊಟ್ಟರೂ ಬಿಜೆಪಿಗೆ ಲಾಭವಾಗುತ್ತೆ. ಇದು ಖುಷಿಯ ವಿಚಾರ ಎಂದರು.

ಸುದೀಪ್ ಪಕ್ಷಕ್ಕೆ ಸೇರುತ್ತಾರೆ ಎಂಬ ಸುಳಿವು ಇತ್ತು. ನಾನೇ ಹೇಳಲು ಹೋಗಿಲ್ಲ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸುದೀಪ್ ತುಂಬಾ ಆತ್ಮೀಯರು. ಅವರ ಮಧ್ಯೆ ನಾನು ಪ್ರವೇಶ ಮಾಡಬಾರದು ಅಂತಾ ಸುಮ್ಮನಿದ್ದೆ. ಸುದೀಪ್ ಒಳ್ಳೆಯ ನಟ. ಒಳ್ಳೆಯ ಆಲೋಚನೆ ಇರುವ ವ್ಯಕ್ತಿ. ಅಭಿವೃದ್ಧಿ ಹಾಗೂ ಬಡವರ ಪರ ಕಾಳಜಿ ಇರುವ ವ್ಯಕ್ತಿ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular