ಹೆಪ್ಪುಗಟ್ಟಿದ ಕೆರೆಯೊಂದರ ಮೇಲೆ ವೃತ್ತಾಕಾರದಲ್ಲಿ ಬೃಹತ್ ಕರೌಸೆಲ್‌ಅನ್ನು ಸೃಷ್ಟಿಸಲಾಗಿದೆ. 1,776 ಅಡಿ ಅಥವಾ 541 ಮೀಟರ್ ವ್ಯಾಸವಿರುವ ಈ ಕರೌಸೆಲ್ ಅಂದಾಜು 1,46,000 ಕೆಜಿಯಷ್ಟು ಹಿಮದಿಂದ ಮಾಡಲ್ಪಟ್ಟಿದೆ.
ನಾರ್ದರ್ನ್ ಮೇಯ್ನ್ ಐಸ್ ಬಸ್ಟರ್‌ಗಳು, ಸರ್ವೇ ಸಿಬ್ಬಂದಿ ಹಿಮದ ಮೇಲೆ ಎಳೆದಿದ್ದ 30 ಇಂಚಿನಷ್ಟು ದಪ್ಪದ ಗೆರೆಯುದ್ದಕ್ಕೂ ಕತ್ತರಿಸುವ ಮೂಲಕ ಆರು ಫುಟ್ಬಾಲ್ ಮೈದಾನಗಳಷ್ಟು ವಿಸ್ತಾರದ ವೃತ್ತ ಸೃಷ್ಟಿಸಿದ್ದಾರೆ.
ಸುದೀರ್ಘ ಚಳಿಗಾಲದ ವೇಳೆ ಮನರಂಜನೆಗೆಂದು ಹೀಗೆ ಹಿಮವನ್ನು ಕತ್ತರಿಸುವ ಚಟುವಟಿಕೆಗಳು ಫಿನ್ಲೆಂಡ್, ಮಿನಸೋಟಾ ಹಾಗೂ ಮೇಯ್ನ್‌ಗಳಲ್ಲಿ ಜರುಗುತ್ತವೆ. ಇದಕ್ಕೆಂದೇ ಪ್ರತ್ಯೇಕವಾಗಿ ವಿಶ್ವ ಐಸ್ ಕರೌಸೆಲ್ ಸಂಘಟನೆಯೂ ಇದೆ.