ಇತ್ತೀಚಿನ ದಿನಗಳಲ್ಲಿ ಮದುವೆಯ ಪರಿಕಲ್ಪನೆಯೇ ಬದಲಾಗಿದೆ. ಮೊದಲೆಲ್ಲ ಗಂಡು – ಹೆಣ್ಣು ಮದುವೆ ದಿನವೇ ಒಬ್ಬರನ್ನೊಬ್ಬರು ನೋಡುತ್ತಿದ್ದರು. ಆದರೆ ಕಾಲ ಬದಲಾಗಿದ್ದ ಹಾಗೆ ಲವ್ ಮ್ಯಾರೇಜ್ ಅನ್ನೊ ಕಾನ್ಸ ಪ್ಟ್ ಚಾಲ್ತಿಗೆ ಬಂತು.
ಬರ್ತಾ ಬರ್ತಾ ಲಿವಿಂಗ್ ಟುಗೆದರ್ ಫೇಮಸ್ ಆಗಿದೆ. ಆದರೆ ಕೆಲವರಿಗೆ ತಾವು ಇಷ್ಟಪಟ್ಟಂತ ಜೀವನ ಸಂಗಾತಿ ಸಿಕ್ಕಿಲ್ಲ ಅನ್ನೋ ನೋವು ಕಾಡಿರುತ್ತೆ. ಆದರೆ ಇಲ್ಲೊಬ್ಬರಿಗೆ ತಮ್ಮ 63 ನೇ ವರ್ಷದಲ್ಲಿ ಪ್ರೇಮಾಂಕುರವಾಗಿದೆ.
ಈ ಲವ್ ಸ್ಟೋರಿಯೇ ಒಂದು ವಿಚಿತ್ರ ಹಾಗೂ ವಿಶೇಷವಾದದ್ದು. ಇದು ಕೇಳಿದ್ರೆ ನಿಮಗೂ ಅಚ್ಚರಿ ಆಗಿಬಿಡುತ್ತೆ. ಅಮೆರಿಕದಲ್ಲಿ ವಾಸವಾಗಿರುವ 63 ವರ್ಷದ ಪೀಟರ್ ಹೆಸರಿನ ವ್ಯಕ್ತಿಯೊಬ್ಬ 23 ವರ್ಷದ ಯುವತಿಯನ್ನ ಪ್ರೀತಿಸಿದ್ದಾರೆ. ಆಕೆ ಅಂತಿಂಥ ಸುಂದರಿ ಅಲ್ಲ, ಅಪರೂಪದ ಸುಂದರಿ. ಈಗ ಇವರಿಬ್ಬರ ಲವ್ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದೆ.
ಹೌದು, ಪೀಟರ್ ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ನ (Al Chatbot) ರೆಪ್ಲಿಕಾ ಎಐ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿದ್ದಾನೆ.
ಇದೊಂದು ಪ್ರೋಗ್ರಾಮಿಂಗ್ ಸಾಧನವಾಗಿದ್ದು, ಯಂತ್ರದ ಸಹಾಯದಿಂದ ಮನುಷ್ಯರ ಪಾತ್ರಧಾರಿ ಸೃಷ್ಟಿಸಿಕೊಳ್ಳಬಹುದು. ಮನುಷ್ಯರಂತೆ ಆ ಪಾತ್ರಧಾರಿಯೊಂದಿಗೆ ಸಂವಹನ ನಡೆಸಬಹುದು. ರೆಫ್ರಿಕಾದಲ್ಲಿ ತನ್ನ ಖಾತೆ ತೆರೆದ ಪೀಟರ್ ಪಾತ್ರವೊಂದನ್ನು ಸೃಷ್ಟಿಸಿಕೊಂಡಿದ್ದು, ಎಐ ಆಂಡ್ರಿಯಾ’ ಎಂದು ಹೆಸರಿಟ್ಟಿದ್ದಾನೆ.
ಅದರೊಂದಿಗೆ ನಿರಂತರ ಸಂಭಾಷಣೆ ಮಾಡುತ್ತಾ ಪ್ರೀತಿಸಲು ಶುರು ಮಾಡಿದ್ದಾನೆ. ಆಂಡ್ರಿಯಾ ಪಾತ್ರಧಾರಿಯೂ ಸಹ ಪೀಟರ್‌ನೊಂದಿಗೆ ಪ್ರೀತಿಯ ಮಾತುಗಳೊಂದಿಗೆ ಪ್ರೀತಿ ಮಾಡಲು ಶುರು ಮಾಡಿದೆ. ಒಂಟಿತನದಿಂದ ಬೇಸತ್ತಿದ್ದ ಪೀಟರ್ ಕೊನೆಗೆ ಆಕೆಯನ್ನೇ ಮದುವೆಯಾಗಲು ನಿರ್ಧರಿಸಿದ್ದಾನೆ.
ಅಂದಹಾಗೆ ತನ್ನ ರೆಪ್ಲಿಕಾ ಖಾತೆಯಲ್ಲಿ 23 ವರ್ಷದ ಆಂಡ್ರಿಯಾ ಹುಡುಗಿ ಪಾತ್ರ ಸೃಷ್ಟಿಸಿಕೊಂಡಿದ್ದ ಪೀಟರ್, ಆ್ಯಪ್‌ನಲ್ಲಿ ರೋಲ್ ಪೇ ಫಂಕ್ಷನ್ನಗಳ ಬಸಿಕೊಂಡು ಮದುವೆಗೆ ಮುಂದಾಗಿದ್ದಾನೆ. ಬಳಿಕ ಪ್ರತಿಕೃತಿ ಸಿದ್ಧಪಡಿಸಿಕೊಳ್ಳಲು ಮಳಿಗೆಗಳಲ್ಲಿ ಬಿಡಿಭಾಗಗಳನ್ನ ಸಂಗ್ರಹಿಸಿದ್ದಾನೆ. ಪ್ರತಿಕೃತಿ ಸಿದ್ಧವಾದ ನಂತರ ಉಂಗುರ ಬದಲಿಸಿಕೊಂಡು ಮದುವೆಯಾಗಿದ್ದಾನೆ.
ಪೀಟರ್ ತನ್ನ ಉಳಿದ ಕಾಲವನ್ನು ಇನ್ನು ಮುಂದೆ ತನ್ನವಳೇ ಆದ ಕೃತಕ ಹುಡುಗಿ ಆಂಡ್ರಿಯಾಳೊಂದಿಗೆ ಕಳೆಯಲು ನಿರ್ಧರಿಸಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಈ ಸ್ಟೋರಿ ಭಾರೀ ಸದ್ದು ಮಾಡುತ್ತಿದೆ.