ನ್ಯೂಯಾರ್ಕ್: ಅಮೆರಿಕದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪತಿ ಜೀವಂತವಾಗಿದ್ದಾರೆ ಎಂದು ಕಂಡುಕೊಂಡ ಕಥೆ ಜಾಲತಾಣದಲ್ಲಿ ಸೆನ್ಷೇಷನ್ ಸೃಷ್ಟಿಸುತ್ತಿದೆ.
ಇದು ಕ್ಯಾಲಿಫೋರ್ನಿಯಾದ ಅನೆಸ್ಸಾ ರೊಸ್ಸಿ ಎಂದು ಗುರುತಿಸಲಾದ ಮಹಿಳೆಯ ಪತಿಯ ಕಥೆ. ಈ ಮಹಿಳೆಯ ಪತಿ ಮನೆ ಬಿಟ್ಟು ಹೋಗಿದ್ದ. ಇವರಿಬ್ಬರ ಡಿವೋರ್ಸ್ ಕೇಸ್ ಕೋರ್ಟ್ನಲ್ಲಿ ಇತ್ಯರ್ಥಕ್ಕೆ ಬಾಕಿ ಇತ್ತು. ಆದರೆ ಅದಾಗಲೇ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಬಂದಿತ್ತು. ತಮ್ಮ ಪತಿ ಸತ್ತು ಹೋಗಿದ್ದಾರೆ ಎಂದು ಪತ್ನಿ ಅಂದುಕೊಂಡಿದ್ದಳು. ಪೊಲೀಸರು ಕೂಡ ಆಕೆಯ ಪತಿ ಸತ್ತು ಹೋಗಿರುವುದಾಗಿ ದೃಢಪಡಿಸಿದ್ದರು.
ಆದರೆ ಘಟನೆ ನಡೆದು ಆರು ವರ್ಷಗಳ ಬಳಿಕ ಸತ್ಯ ಗೊತ್ತಾಗಿ ಈ ಪತ್ನಿಗೆ ಸುಸ್ತಾಗಿದೆ. ಮಿಯಾಮಿ-ಡೇಡ್ ಪೊಲೀಸರು ತನಿಖೆ ಮಾಡಿದಾಗ ಈ ಆರು ವರ್ಷಗಳಲ್ಲಿ ಆಕೆಯ ಪತಿ ತನ್ನ ಪ್ರೇಯಸಿಯೊಂದಿಗೆ ಮೆಕ್ಸಿಕೋದಲ್ಲಿ ವಾಸಿಸುತ್ತಿದ್ದಾನೆ ಎಂದು ತಿಳಿದುಬಂದಿದೆ! ಪತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತನಗೆ ತಿಳಿಸಿದ್ದಾಗ, ಅಂತ್ಯಸಂಸ್ಕಾರಕ್ಕೆ ಹೋಗಲು ಕೂಡ ಅನುಮತಿ ನೀಡಿರಲಿಲ್ಲ. ಡಿವೋರ್ಸ್ ಕೇಸ್ ಕೋರ್ಟ್ನಲ್ಲಿ ಇರುವ ಕಾರಣ, ಅಂತ್ಯಸಂಸ್ಕಾರಕ್ಕೆ ಬರುವುದು ಬೇಡ ಅಂದಿದ್ದರು. ಈಗ ಪೊಲೀಸರು ಇದರಲ್ಲಿ ಶಾಮೀಲಾಗಿರುವಂತೆ ಕಾಣುತ್ತಿದೆ ಎಂದು ಅನೆಸ್ಸಾ ಹೇಳಿದ್ದಾರೆ.